ನಾನೇ ರಾಜ್ಯದ ನಂಬರ್‌ ಒನ್‌ ಶಾಸಕ, ನನಗೆ ಭಾರೀ ಬೇಡಿಕೆ ಇದೆ : ಪ್ರಮೋದ್‌ ಮಧ್ವರಾಜ್‌

ಉಡುಪಿ : ನಾನು ಬಿಜೆಪಿಗೆ ಬಾರದಂತೆ ನನ್ನನ್ನು ಬಿಜೆಪಿ ನಾಯಕರೇ ತಡೆಯುತ್ತಿದ್ದಾರೆ ಎಂದು ಪ್ರಮೋದ್‌ ಮಧ್ವರಾಜ್ ಆರೋಪಿಸಿದ್ದಾರೆ. ನಾನು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದು ಬಿಜೆಪಿ ಶಾಸಕರಿಗೆ ಭಯ ಶುರುವಾಗಿದೆ. ಅದಕ್ಕೆ ನಾನು ಬಿಜೆಪಿಗೆ ಬರುತ್ತಿರುವುದನ್ನು ತಡೆಯುತ್ತಿದ್ದಾರೆ. ಬಿಜೆಪಿಯಿಂದ ತಡೆ ಬಂದ್ರೆ ಹೋಗುವ ಪ್ರಶ್ನೆಯೇ ಬರಲ್ಲ. ತಡೆ ಬಂದ ಮೇಲೆ ಹೋಗುವ ಪ್ರಯತ್ನ ನಡೆಸುವುದಿಲ್ಲ ಎಂದಿದ್ದಾರೆ.
ಗೇಟು ಓಪನಿದ್ರೆ ಹೋಗಬಹುದು. ಗೇಟೇ ಬಂದ್ ಆಗಿದ್ರೆ ಹೋಗುವ ಪ್ರಶ್ನೆ ಬರುವುದಿಲ್ಲ. ನಾನು ರಾಜ್ಯದ ನಂಬರ್ ವನ್ ಶಾಸಕ. ನನಗೆ ಬೇಡಿಕೆ ಇರೋದು‌ ನಿಜ
ನಾನು ಚುನಾವಣೆಗೆ ಉಡುಪಿಯಿಂದಲೇ ಸ್ಪರ್ಧಿಸುತ್ತೇನೆ. ಕಾಂಗ್ರೆಸ್ ಪಕ್ಷದಿಂದ ಉಡುಪಿ ಕ್ಷೇತ್ರದ ಆಕಾಂಕ್ಷಿಯಾಗಿದ್ದೇನೆ. ಒಂದು ಲಕ್ಷ ರುಪಾಯಿ ಪಾವತಿಸಿ ಅರ್ಜಿ ಹಾಕಿದ್ದೇನೆ. ದುಡಿದ ಹಣ ನಷ್ಟ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com