ಮೊಹಮ್ಮದ್ ಶಮಿಗೆ ಕ್ಲೀನ್ ಚಿಟ್ : ಫಿಕ್ಸಿಂಗ್ ಆರೋಪ ನಿರಾಧಾರ ಎಂದ BCCI

ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಿಸುತ್ತಿದ್ದ ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಬಿಸಿಸಿಐ ಗುರುವಾರ ಕ್ಲೀನ್ ಚಿಟ್ ನೀಡಿದೆ. ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ಮಾಡಿರುವ ಮ್ಯಾಚ್ ಫಿಕ್ಸಿಂಗ್ ಆರೋಪಗಳೆಲ್ಲವೂ ನಿರಾಧಾರವಾಗಿವೆ ಎಂದು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳ ಹೇಳಿದೆ.

‘ ಮೊಹಮ್ಮದ್ ಶಮಿ ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆ, ಅದಕ್ಕಾಗಿ ಪಾಕಿಸ್ತಾನದ ಮಹಿಳೆಯೊಬ್ಬಳಿಂದ ಹಣವನ್ನು ಕೂಡ ಪಡೆದಿದ್ದಾರೆ ‘ ಎಂದು ಪತ್ನಿ ಹಸೀನ್ ಜಹಾನ್ ಆರೋಪಿಸಿದ್ದರು.

ಏಪ್ರಿಲ್ 7 ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರವಾಗಿ ಆಡುವ ಅವಕಾಶವನ್ನು ಶಮಿ ಪಡೆದುಕೊಂಡಿದ್ದಾರೆ. ಪತ್ನಿಯ ಆರೋಪದ ಹಿನ್ನೆಲೆಯಲ್ಲಿ ಶಮಿಯ ಟೀಮ್ ಕಾಂಟ್ರಾಕ್ಟ್ ಅನ್ನು ತಡೆಹಿಡಿದಿದ್ದ ಬಿಸಿಸಿಐ ಶಮಿಗೆ ‘ಬಿ’ ಗ್ರೇಡ್ ಕಾಂಟ್ರಾಕ್ಟ್  ನೀಡಲಿದೆ.

Leave a Reply

Your email address will not be published.

Social Media Auto Publish Powered By : XYZScripts.com