ಅತ್ಯಾಚಾರ ಮಾಡಲು ಬಂದ ವ್ಯಕ್ತಿಯಿಂದ ಪಾರಾಗಲು 6ನೇ ಮಹಡಿಯಿಂದ ಜಿಗಿದ ಮಾಡೆಲ್..!

ಅತ್ಯಾಚಾರ ಮಾಡಲು ಬಂದ ವ್ಯಕ್ತಿಯಿಂದ ಪಾರಾಗಲು ರಷ್ಯನ್ ಮಾಡೆಲ್ 6ನೇ ಮಹಡಿಯಿಂದ ಜಿಗಿದಿರುವ ಘಟನೆ ದುಬೈನಲ್ಲಿ ನಡೆದಿದೆ. ಅಷ್ಟು ಎತ್ತರದಿಂದ ಜಿಗಿದರೂ ಆಶ್ಚರ್ಯಕರ ರೀತಿಯಲ್ಲಿ ಮಾಡೆಲ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆದರೆ ಬೆನ್ನಿನ ಮೂಳೆ (Spinal Chord) ಮುರಿತಕ್ಕೊಳಗಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಅಮೇರಿಕದ ಬಿಸಿನೆಸ್ ಮನ್ ಮಾಡೆಲ್ ಳನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಆದರೆ 22 ವರ್ಷದ ಎಕಟೆರಿನಾ ಸ್ತೆತ್ಸ್ಯುಕ್ ನಿರಾಕರಿಸಿದಾಗ ಚಾಕು ತೋರಿಸಿ ಬೆದರಿಸಿದ್ದಾನೆ. ಆಗ ಆತನಿಂದ ಪಾರಾಗಲು ಯಾವುದೇ ದಾರಿ ಕಾಣದಾದಾಗ, ಎಕಟೆರಿನಾ 6ನೇ ಮಹಡಿಯ ಕಿಟಕಿಯಿಂದ ಜಿಗಿದಿದ್ದಾಳೆ.

ಘಟನೆಯ ನಂತರ ದೇಶದಿಂದ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಪೋಲೀಸರು ದುಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಒಂದು ವೇಳೆ ಆರೋಪ ಸಾಬೀತಾದರೆ ಆತನಿಗೆ 15 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.

Leave a Reply

Your email address will not be published.

Social Media Auto Publish Powered By : XYZScripts.com