ನಮ್ಮ ಕುಟುಂಬದಲ್ಲಿ ಟಿಕೆಟ್ ಆಕಾಂಕ್ಷಿಗಳಿದ್ದರೂ HDK, ರೇವಣ್ಣ ಮಾತ್ರ ಸ್ಪರ್ಧಿಸ್ತಾರೆ : ಅನಿತಾ

ರಾಯಚೂರು : ನಮ್ಮ ಕುಟುಂಬದಲ್ಲೂ ಟಿಕೆಟ್ ಆಕಾಂಕ್ಷಿಗಳಿದ್ದೇವೆ. ಆದರೆ ಮುಂಬರುವ ಚುನಾವಣೆಯಲ್ಲಿ ಕುಮಾರಸ್ವಾಮಿ ಹಾಗೂ ರೇವಣ್ಣ ಮಾತ್ರ ಸ್ಪರ್ಧೆ ಮಾಡುತ್ತಿರುವುದಾಗಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಕಡಿಮೆ ಅಂತರದಿಂದ ಸೋತಿದ್ದರಿಂದ ಆಕಾಂಕ್ಷಿಯಾಗಿದ್ದೆ. ನಮ್ಮ ಕುಟುಂಬದಿಂದ ಆಕಾಂಕ್ಷಿಗಳಿದ್ದೇವೆ. ಆದರೆ ಅಂತಿಮವಾಗಿ ಇಬ್ಬರೇ ಸ್ಪರ್ಧಿಸಲಿದ್ದಾರೆ. ಹೊಳೆನರಸಿಪುರದಲ್ಲಿ ದೇವೇಗೌಡರ ಕುಟುಂಬದ ಬಗ್ಗೆ ಭಯ ಇದೆ. ಹೀಗಾಗಿ ಅವರನ್ನು ಸೋಲಿಸಿ ಎಂದು ಸಿಎಂ ಹೇಳುತ್ತಿರುವುದಾಗಿ ವಾಗ್ದಾಳಿ ನಡೆಸಿದ್ದಾರೆ.

ಈಗ ಯಾವ ಪಕ್ಷವೂ ಮಹಿಳೆಯರಿಗೆ ಟಿಕೆಟ್ ನೀಡುತ್ತಿಲ್ಲ. ಗೆಲ್ಲುವುದೇ ಎಲ್ಲಾ ಪಕ್ಷಗಳಿಗೆ ಆದ್ಯತೆ ಆಗಿದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com