ಮೋದಿ ಮುಖವನ್ನು ಹಂದಿಯ ಮುಖದಂತೆ ತಿರುಚಿದ ಕಿಡಿಗೇಡಿಗಳ ವಿರುದ್ದ ದಾಖಲಾಯ್ತು ದೂರು

ಮಂಗಳೂರು : ಪ್ರಧಾನಿ ಮೋದಿ ಫೋಟೋವನ್ನು ವಿರೂಪಗೊಳಿಸಿ ವಾಟ್ಸಾಪ್‌ಗೆ ಹಾಕಿದ್ದ ಹಿನ್ನೆಲೆಯಲ್ಲಿ ವಾಟ್ಸಾಪ್‌ ಗ್ರೂಪ್‌ ಅಡ್ಮಿನ್‌ ಹಾಗೂ ಸದಸ್ಯನ ವಿರುದ್ಧ ದೂರು ದಾಖಲಾಗಿದೆ.


ಫ್ರೆಂಡ್ಸ್ ಪಡುಬೆಟ್ಟು ಎಂಬ ಗ್ರೂಪ್‌ನಲ್ಲಿ ಪ್ರಧಾನಿ ಮೋದಿರ ಅವರ ಮುಖವನ್ನು ಹಂದಿಯ ಮುಖದಂತೆ ಚಿತ್ರಿಸಿ ಗ್ರೂಪ್‌ಗೆ ಹಾಕಲಾಗಿತ್ತು. ಈ ಹಿನ್ನೆಲಯಲ್ಲಿ ಗ್ರೂಪ್‌ ಅಡ್ಮಿನ್‌ ಮೊಹಮದ್‌  ಹನೀಫ್‌ ಹಾಗೂ ಸದಸ್ಯನೊಬ್ಬನ ವಿರುದ್ದ ದೂರು ದಾಖಲಾಗಿದೆ. ನೆಲ್ಯಾಡಿಯ ಪ್ರಕಾಶ್‌ ಎಂಬುವವರು ಉಪ್ಪಿನಂಗಡಿಯ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನಲ್ಲಿರುವುದೇನು : ಫೆಂಡ್ಸ್‌ ಪಡುಬೆಟ್ಟು ವಾಟ್ಸಾಪ್‌ ಗ್ರೂಪ್‌ನಲ್ಲಿ ಪ್ರಧಾನಿ ಮುಖವನ್ನು ಹಂದಿಯ ಮುಖದಂತೆ ತಿರುಚಿ ಗ್ರೂಪಿಗೆ ದಿನಾಂಕ 20ರ ಮದ್ಯಾಹ್ನ ಹಾಕಿದ್ದಾನೆ. ಇದರಿಂದ ಪ್ರಧಾನಿಯ ಘನತೆಗೆ ಧಕ್ಕೆ ಉಂಟಾಗಿದೆ. ಆದ್ದರಿಂದ ಇವರನ್ನು ಕರೆಸಿ ವಿಚಾರಣೆ ನಡೆಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Leave a Reply

Your email address will not be published.