ಶಾಸಕರಾಗಲು ಜಗದೀಶ್‌ ಶೆಟ್ಟರ್‌ ನಾಲಾಯಕ್‌ ಎಂದ JDS ಅಭ್ಯರ್ಥಿ

 

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕರಾಗಲು ಜಗದೀಶ್ ಶೆಟ್ಟರ್ ನಾಲಾಯಕ್ ಎಂದು ಜೆಡಿಎಸ್‌ ಅಭ್ಯರ್ಥಿ ರಾಜಣ್ಣ ಕೊರವಿ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿ -ಧಾರವಾಡ ಸೆಂಟ್ರಲ್‌ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿದ ಬಳಿಕ ನಾನು 200ಕ್ಕೂ ಹೆಚ್ಚು ಬೂತ್‌ಗಳಲ್ಲಿ ಪ್ರಚಾರ ಮಾಡಿದ್ದೇನೆ. ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮ ಹಾಗೂ ರಾಜ್ಯ -ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಿದ್ದೇವೆ. ನಾವು, ಎಚ್.ಡಿ. ಕುಮಾರಸ್ವಾಮಿ ಅವರು 20 ತಿಂಗಳ ಕಾಲ ಮಾಡಿದ ಅಭಿವೃದ್ಧಿ ಕಾರ್ಯವನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಹಾಲಿ‌ ಶಾಸಕ ಜಗದೀಶ್ ಶೆಟ್ಟರ್ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾಗಿ ಮಾಡಿದ ಕೆಲಸದ ಬಗ್ಗೆ ನಾನು ಹೆಚ್ಚಿಗೆ ಮಾತನಾಡಲಾರೆ. ಶೆಟ್ಟರ್ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕರಾಗಿ ಮಾಡಿದ ಕಾರ್ಯ ಏನೂ ಇಲ್ಲ. ರಸ್ತೆಗಳು ಸಂಪೂರ್ಣ ಹಾಳಾಗಿವೆ. ನಾಲಾಗಳಲ್ಲಿ ಒಳಚರಂಡಿ ನೀರು ಮನೆ ಮುಂದೆಯೇ ಹರಿದು ಬರುತಿದ್ದರೂ ಶಾಸಕರು ಈ ಬಗ್ಗೆ ಚಕಾರ ಎತ್ತುತಿಲ್ಲ ಎಂದು ಶೆಟ್ಟರ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶಾಸಕರು ಕೇವಲ ಅಭಿವೃದ್ಧಿಯಾದ ಕೇಲವೇ ವಾರ್ಡಗಳಾದ ವಿಜಯನಗರ, ವಿಶ್ವೇಶ್ವರನಗರ, ಅಶೋಕನಗರಗಳಿಗೆ ಭೇಟಿ ನೀಡುತ್ತಾರೆ. ಈಗ ಮತ್ತೆ ಅವರು ಹುಬ್ಬಳ್ಳಿ ನಗರದಲ್ಲಿ ನನ್ನ ಇನ್ನೊಮ್ಮೆ ಗೆಲ್ಲಿಸಿ ಅಂತಾ ಕೇಳುತಿದ್ದಾರೆ. ಜಗದೀಶ್ ಶೆಟ್ಟರ್ ಮುಖವಾಡ ಹಾಕಿಕೊಂಡು ಜನರ ಬಳಿ ಮತ ಕೇಳಲು ಬರುತಿದ್ದಾರೆ. ಮೊದಲು ಹಿಂದು-ಮುಸ್ಲಿಮ್ ಮಧ್ಯೆ ವೈಮನಸ್ಸು ಮೂಡುವಂತೆ ಮಾಡಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಮತ ಕೇಳುತ್ತಿರುವುದಾಗಿ ಹೇಳಿದ್ದಾರೆ.

ನನಗೆ ಆರ್ಶೀವಾದ ಮಾಡಿದರೆ ಯುವಕರಿಗೆ ಉದ್ಯೋಗ ಸೃಷ್ಠಿಸುತ್ತೇನೆ.  ಕಳಸಾ ಬಂಡೂರಿ ಮಹದಾಯಿ ಯೋಜನೆ ಜಾರಿಗೆ ಹೋರಾಟ ಮಾಡುತ್ತೇನೆ. ರಸ್ತೆ ಸುಧಾರಣೆ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸೇರಿ ಹೊಸ ಹೊಸ ಯೋಜನೆ ಜಾರಿಗೆ ತರುವುದಾಗಿ ಆಶ್ವಾಸನೆ ನೀಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com