ಪರೋಡಿ ಅಕೌಂಟ್ ನಿಂದ ಅಂಬೇಡ್ಕರ್ ಬಗ್ಗೆ ವಿವಾದಿತ ಟ್ವೀಟ್ : ಪಾಂಡ್ಯ ವಿರುದ್ಧ FIR ದಾಖಲು..?
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಕುರಿತಾಗಿ ಹಾರ್ದಿಕ್ ಪಾಂಡ್ಯ ಹೆಸರಿನ ಪರೋಡಿ ಅಕೌಂಟ್ ನಿಂದ ಮಾಡಲಾಗಿರುವ ಟ್ವೀಟ್ ನಿಂದಾಗಿ, ಟೀಮ್ ಇಂಡಿಯಾದ ಆಲ್ರೌಂಡರ್ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ, ರಾಜಸ್ಥಾನದ ಜೋಧಪುರದ ಕೋರ್ಟ್ ಪೋಲೀಸರಿಗೆ ನಿರ್ದೇಶನ ನೀಡಿದೆ. ಆದರೆ ದೂರಿನಲ್ಲಿ ಯಾವ ಅಕೌಂಟ್ ವಿರುದ್ಧ ಆರೋಪವನ್ನು ಮಾಡಲಾಗಿದೆಯೋ, ಅದು ಹಾರ್ದಿಕ್ ಪಾಂಡ್ಯ ಅವರ ಅಧಿಕೃತ ಟ್ವಿಟರ್ ಅಕೌಂಟ್ ಅಲ್ಲ.
ಹಾರ್ದಿಕ್ ಪಾಂಡ್ಯ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್ ‘ @hardikpandya7 ‘ ಎಂಬುದಾಗಿದೆ. ಅಂಬೇಡ್ಕರ್ ಅವರ ವಿರುದ್ಧ ಟ್ವೀಟ್ ಮಾಡಿರುವ ಅಕೌಂಟಿನ ಹ್ಯಾಂಡಲ್ ‘ @sirhardik3777 ‘ ಎಂಬುದಾಗಿದೆ.
‘ ನಮಗೆ ಇನ್ನೂ ಕೋರ್ಟ್ ನಿಂದ ಆದೇಶದ ಪ್ರತಿ ಬಂದಿಲ್ಲ. ಅದು ಬಂದ ನಂತರವೇ ಪ್ರಕರಣದ ಬಗ್ಗೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ‘ ಎಂದು ಜೈಪುರದ ಪೋಲೀಸ್ ಅಧಿಕಾರಿ ರಾಜೇಶ್ ಯಾದವ್ ತಿಳಿಸಿದ್ದಾರೆ.