ಸರ್ದಾರ್‌ ಪಟೇಲ್‌ ಪ್ರತಿಮೆಗೆ ಖಾಲಿ ಬಾಟಲಿಯ ಹಾರ ಹಾಕಿದ ಕಿಡಿಗೇಡಿಗಳು

ಅಹಮದಾಬಾದ್‌ : ತ್ರಿಪುರಾ ರಾಜ್ಯದ ವಿಧಾನಸಭಾ ಚುನಾವಣೆ ಮುಗಿದು ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಅನೇಕ ಕಡೆ ಕಿಡಿಗೇಡಿಗಳು ಪ್ರತಿಮೆಗಳನ್ನು ಧ್ವಂಸ ಮಾಡುತ್ತಿದ್ದು, ಈಗ ಗುಜರಾತ್‌ನ ಗಾಂಧಿನಗರದಲ್ಲಿರುವ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ಪ್ರತಿಮೆಗೆ ಬಾಟಲಿ ಹಾರ ಹಾಕಲಾಗಿದೆ.

ಗಾಂಧಿನಗರದ ಶೆರ್ಥಾ ಗ್ರಂಥಾಲಯದ ಎದುರಿಗಿರುವ ಈ ಪ್ರತಿಮೆಗೆ ಕಿಡಿಗೇಡಿಗಳು ತಂಪು ಪಾನೀಯದಿಂದ ಖಾಲಿಯಾದ ಬಾಟಲಿಗಳು ದಾರದಲ್ಲಿ ಕಟ್ಟಿ ಅದನ್ನು ಪ್ರತಿಮೆಗೆ ಹಾಕಿದ್ದಾರೆ.

ಪ್ರತಿಮೆಗೆ ಬಾಟಲಿ ಹಾರ ಹಾಕಿರುವುದನ್ನು ಗ್ರಾಮಸ್ಥರು ನೋಡಿದ ಕೂಡಲೆ ಅದನ್ನು ತೆಗೆದು ಪ್ರತಿಮೆಯನ್ನು ಸ್ವಚ್ಛಗೊಳಿಸಿದ್ದಾರೆ. ಅಲ್ಲದೆ ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.

1992 ರಲ್ಲಿ ಈ ಪ್ರತಿಮೆಯನ್ನು ಎಲ್‌. ಕೆ ಅಡ್ವಾಣಿಯವರು ಅನಾವರಣಗೊಳಿಸಿದ್ದರು.

Leave a Reply

Your email address will not be published.