ಜೀವಂತವಾಗಿ ಪತ್ತೆಯಾಯ್ತು ಒಂದು ದಿನದ ಹಿಂದೆ ಮಣ್ಣಿನಲ್ಲಿ ಹೂತಿಟ್ಟಿದ್ದ ನವಜಾತ ಶಿಶು

ಚಿಕ್ಕಬಳ್ಳಾಪುರ : ಆಗ ತಾನೆ ಜನಿಸಿದ್ದ ಗಂಡು ಮಗುವನ್ನು ಮಣ್ಣಲ್ಲಿ ಹೂತು ಹಾಕಿದ್ದ ಅಮಾನವೀಯ ಘಟನೆ ಚಿಕ್ಕಬಳ್ಳಾಪುರದ ಗಡದಾಸರಹಳ್ಳಿಯಲ್ಲಿ ನಡೆದಿದೆ. ಮಗುವನ್ನು ನಿನ್ನೆ ಹೂತು ಹಾಕಲಾಗಿತ್ತು. ಆದರೆ ಅದೃಷ್ಟವಶಾತ್‌ ಮಗು ಬದುಕಿದ್ದು ಮಣ್ಣಲ್ಲಿದ್ದ ಮಗು ಅಳುತ್ತಿತ್ತು.  ಅಳುವುದನ್ನು ಕೇಳಿದ ಗ್ರಾಮಸ್ಥರು ಮಣ್ಣನ್ನು ತೆಗೆದು ನೋಡಿದಾಗ ಮಗು ಪತ್ತೆಯಾಗಿದೆ.

ಕೂಡಲೆ ಮಗುವನ್ನು ಕುರುಬೂರು ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಮಗು ಪ್ರಾಣಾಪಾಯದಿಂದ ಪಾರಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಪ್ರಕರಣ ಸಂಬಂಧ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅನೈತಿಕ ಸಂಬಂಧದಿಂದ ಮಗು ಹುಟ್ಟಿದ್ದಕ್ಕೆ ಮಗುವನ್ನು ಹೂತು ಹಾಕಿರಬಹುದು ಎಂದು ಗ್ರಾಮಸ್ಥರು ಹೇಳುತ್ತಿದ್ದು. ಮಗು ಯಾರದ್ದು ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

 

Leave a Reply

Your email address will not be published.

Social Media Auto Publish Powered By : XYZScripts.com