ನಾನು ಯಾರ ಜೊತೆನೂ ಕದ್ದುಮುಚ್ಚಿ ಮಾತಾಡಲ್ಲ, ಏನಿದ್ದರೂ ನೇರವಾಗೇ ಮಾತಾಡ್ತೀನಿ : CM

ಬೆಂಗಳೂರು : ನಾನೊಬ್ಬ ಕಾಂಗ್ರೆಸ್‌ ಪಕ್ಷದ ಮುಖಂಡ. ನನ್ನ ಪಕ್ಷವನ್ನು ಗೆಲ್ಲಿಸುವಂತೆ ನಾನು ಹೇಳಲೇಬೇಕು. ಅದನ್ನು ಬಿಟ್ಟು ಜೆಡಿಎಸ್‌ ಪಕ್ಷವನ್ನು ಗೆಲ್ಲಿಸಿ ಅಂತ ಹೇಳಕ್ಕಾಗುತ್ತಾ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇತ್ತೀಚೆಗಷ್ಟೇ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಾಗೂರು ಮಂಜೇಗೌಡ ಅವರೊಂದಿಗೆ ಸಿಎಂ ಸಿದ್ದರಾಮಯ್ಯ ಕರೆ ಮಾಡಿ ಮಾತನಾಡಿದ್ದು, ಸರ್ಕಾರಿ ಕೆಲಸಕ್ಕೆ ತಕ್ಷಣವೇ ರಾಜೀನಾಮೆ ನೀಡಿ, ಹೊಳೆ ನರಸೀಪುರ ಕ್ಷೇತ್ರದಲ್ಲಿ ರೇವಣ್ಣ ಎದುು ಚುನಾವಣೆಗೆ ನಿಲ್ಲುವಂತೆ ಸೂಚಿಸಿದ್ದರು. ಗೌಡರ ಮಕ್ಕಳು ಗೆದ್ದಿದ್ದು ಸಾಕು, ಈ ಬಾರಿ ಮಜೇಗೌಡರನ್ನು ಗೆಲ್ಲಿಸಬೇಕು. ಎಲ್ಲರೂ ಅವರ ಪರ ಕೆಲಸ ಮಾಡಬೇಕು. ಕೂಡಲೇ ನೀನು ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ, ಚುನಾವಣೆಗೆ ನಿಲ್ಲು ಎಂದಿದ್ದ ಆಡಿಯೋ ವೈರಲ್‌ ಆಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಹೌದು ಮಂಜೇಗೌಡ ಜೊತೆ ಮಾತನಾಡಿದ್ದು ನಾನೇ, ಏನಿವಾಗ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ನಾನು ಕದ್ದುಮುಚ್ಚಿ ಮಾತನಾಡುವುದಿಲ್ಲ. ಏನಿದ್ದರೂ ನೇರವಾಗೇ ಮಾತನಾಡುತ್ತೇನೆ. ನನ್ನ ಫೋನ್‌ ಕದ್ದಾಲಿಕೆ ಮಾಡಿದರೂ ತಪ್ಪೇನಿಲ್ಲ. ನಾನು ಮಾತನಾಡಿದ್ದರಲ್ಲಿ ತಪ್ಪೇನೂ ಇಲ್ಲ ಎಂದಿದ್ದಾರೆ.

Leave a Reply

Your email address will not be published.