BJP ಶಾಸಕ ಸತೀಶ್‌ ರೆಡ್ಡಿ ಬಾಮೈದ ಎಂದು ಹೇಳಿಕೊಂಡು ಯುವಕನ ಗೂಂಡಾಗಿರಿ !

ಬೆಂಗಳೂರು : ಬೊಮ್ಮನ ಹಳ್ಳಿಯ ಶಾಸಕ ಸತೀಶ್ ರೆಡ್ಡಿಯವರ ಬಾಮೈದ ಎಂದು ಹೇಳಿಕೊಂಡು ದುಷ್ಕರ್ಮಿಯೊಬ್ಬ ಗೂಂಡಾಗಿರಿ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೋರಮಂಗಲದ ಸಮೀಪ ಈತ ಕಾರಿನಲ್ಲಿ ತೆರಳುತ್ತಿದ್ದ. ಈ ವೇಳೆ ಮುಂದಿದ್ದ ಕಾರು ಚಾಲಕ ತಿಪ್ಪೇಸ್ವಾಮಿ, ಈತನ ಕಾರು ಮುಂದೆ ಹೋಗಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಚಾಲಕನನ್ನು ಕಾರಿನಿಂದ ಹೊರಗೆಳೆದು ಹಲ್ಲೆ ಮಾಡಿದ್ದಾನೆ. ಅಲ್ಲದೆ ನಾನು ಯಾರು ಗೊತ್ತಾ,  ಶಾಸಕ ಸತೀಶ್ ರೆಡ್ಡಿ ಬಾಮೈದ, ನನಗೇ ಸೈಡ್ ಬಿಡಲು ಅವಕಾಶ ಮಾಡಿಕೊಡುತ್ತಿಲ್ಲ. ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಧಮ್ಕಿ ಹಾಕಿರುವುದಾಗಿ ತಿಳಿದುಬಂದಿದೆ.

ಚಾಲಕ ತಿಪ್ಪೇಸ್ವಾಮಿ ಹಲ್ಲೆಯಿಂದಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದೆಡೆ ಶಾಸಕ ಸತೀಶ್ ರೆಡ್ಡಿ ನನಗೆ ಬಾಮೈದನೇ ಇಲ್ಲ. ಇವನು ಹೇಗೆ ನನ್ನ ಬಾಮೈದನಾಗುತ್ತಾನೆ ಎಂದಿದ್ದಾರೆ.

 

Leave a Reply

Your email address will not be published.