ಗಂಡನ ಕೆಲಸವನ್ನು ಮಗನಿಗೆ ನೀಡಲಿಲ್ಲ ಎಂದು ಶಾಸಕರ ಮನೆ ಎದುರು ಮಹಿಳೆ ಆತ್ಮಹತ್ಯೆ

ಬಾಗಲಕೋಟೆ : ಗಂಡನ ನಿಧನದ ಬಳಿಕ ಮಗನಿಗೆ ಗ್ರಾಮಸೇವಕ ಕೆಲಸ ನೀಡದ ಹಿನ್ನೆಲೆಯಲ್ಲಿ ಶಾಸಕರ ಮನೆ ಎದುರು ವಿಷಸೇವಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾದಾಮಿ ಪಟ್ಟಣದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಶಾಂತವ್ವ ವಾಲಿಕಾರ (46) ಎಂದು ಹೆಸರಿಸಲಾಗಿದೆ. ಗಂಡನ ನೌಕರಿ ಮಗನಿಗೆ ನೀಡದ ಹಿನ್ನೆಲೆಯಲ್ಲಿ ಬಾದಾಮಿ ಶಾಸಕ ಬಿ.ಬಿ ಚಿಮ್ಮನಕಟ್ಟಿ ಮನೆ ಮುಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತಿ ಮುತ್ತಲಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮಸೇವಕನಾಗಿದ್ದ. ಕರ್ತವ್ಯನಿರತನಾಗಿದ್ದಾಗ 2 ವರ್ಷದ ಹಿಂದೆ ಮೃತಪಟ್ಟಿದ್ದ. ಮೃತ ಗೋವಿಂದಪ್ಪನ ಮಗ ಶಂಕ್ರಪ್ಪ ವಾಲಿಕಾರ ಗೆ ಕೆಲಸ ನೀಡಬೇಕೆಂದು ತಾಯಿ ಮನವಿ‌ ಮಾಡಿದ್ದಳು. ಶಾಸಕರ ಹೇಳಿಕೆ‌ ಮೇರೆಗೆ ಸ್ವಜಾತಿಯವರಿಗೆ ಗ್ರಾಮಸೇವಕ‌ ಕೆಲಸ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಘಟನೆ ಹಿನ್ನೆಲೆ ಶಾಸಕ ಚಿಮ್ಮನಕಟ್ಟಿ ಮನೆ ಮುಂದೆ ಸ್ಥಳೀಯರು ಧರಣಿ ನಡೆಸುತ್ತಿದ್ದು, ಮಹಿಳೆ ಸಾವಿಗೆ ಶಾಸಕರೇ ಕಾರಣ ಎಂದು ಆರೋಪಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com