Kenya : ವಿಶ್ವದ ಕೊನೆಯ ಬಿಳಿ ಗಂಡು ಘೇಂಡಾಮೃಗ ‘ಸುಡಾನ್‌’ ನಿಧನ

ನೈರೋಬಿ : ವಿಶ್ವದ ಕೊನೆಯ ಅಪರೂಪದ ಬಿಳಿಯ ಘೇಂಡಾಮೃಗ ಮಾರ್ಚ್‌ 20ರಂದು ಕೀನ್ಯಾದಲ್ಲಿ ಮೃತಪಟ್ಟಿದೆ. ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ 45 ವರ್ಷದ ಘೇಂಡಾಮೃಗ ಸುಡಾನ್‌, ಮೃತಪಟ್ಟಿರುವುದಾಗಿ ಖಾಸಗಿ ವಾಹಿನಿಗಳು ವರದಿ ಮಾಡಿವೆ.
ಈ ಜಾತಿಯ ಘೇಂಡಾಮೃಗಗಳ ಸಂಖ್ಯೆ ಅತೀ ಕಡಿಮೆ ಇದ್ದು ಸದ್ಯ ಇನ್ನೆರಡು ಹೆಣ್ಣು ಘೇಂಡಾಮೃಗಗಳು ಮಾತ್ರ ಉಳಿದುಕೊಂಡಿವೆ.
ಕೆಲ ದಿನಗಳಿಂದ ಸುಡಾನ್‌ ಸೋಕಿಂಗೆ ತುತ್ತಾಗಿತ್ತು. ಆರೋಗ್ಯ ಪರಿಸ್ಥಿತಿ ಹದಗೆಟ್ಟಿತ್ತು. ಅದು ಬದುಕುವ ಸಾಧ್ಯತೆಯೇ ಇಲ್ಲ ಎಂದು ಅರಿತ ವೈದ್ಯರ ತಂಡ ದಯಾಮರಣ ನೀಡಿರುವುದಾಗಿ ಹೇಳಲಾಗಿದೆ.


ಸುಡಾನ್‌, ಕೀನ್ಯಾದ ಸಂರಕ್ಷಿತ ಪ್ರದೇಶದಲ್ಲಿ ವಾಸವಾಗಿದ್ದು, ಇತ್ತೀಚೆನ ದಿನಗಳಲ್ಲಿ ಬೇಟೆಯಾಡುವವರ ಸಂಖ್ಯೆ ಹೆಚ್ಚಿದ್ದ ಕಾರಣ ಸುಡಾನ್‌ ಸುತ್ತಲೂ ಗಾರ್ಡ್‌ಗಳು ಗನ್‌ ಹಿಡಿದುಕೊಂಡು ಕಾವಲು ಕಾಯುತ್ತಿದ್ದರು ಎಂದು ತಿಳಿದುಬಂದಿದೆ.
ಬಿಳಿಯ ಘೇಂಡಾಮೃಗಗಳಿಂದ ಪುರುಷರ ಶಕ್ತಿ ಹೆಚ್ಚಾಗುವುದಲ್ಲದೆ, ಅನೇಕ ಔಷಧಗಳಿಗೆ ಇದು ಸಹಕಾರಿಯಾಗಿದೆ. ಅಲ್ಲದೆ ಅಲಂಕಾರಿಕ ವಸ್ತುವಾಗಿ ಬಳಸಲು ಇದನ್ನು ಬೇಟೆಯಾಡಲಾಗುತ್ತದೆ.
ಸದ್ಯ ಸುಡಾನ್‌ನ ವೀರ್ಯವನ್ನು ಶೇಖರಿಸಿಟ್ಟಿದ್ದು, ಇದರಿಂದಾಗಿ ಇನ್ನೆರೆಡು ಹೆಣ್ಣು ಘೇಂಡಾಮೃಗಗಳ ಸಂತಾನೋತ್ಪತ್ತಿ ಮಾಡಬಹುದು ಎಂದು ಹೇಳಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com