Facebook ಡಿಲೀಟ್‌ ಮಾಡುವಂತೆ ಸೂಚನೆ ನೀಡಿದ ವಾಟ್ಸಾಪ್ ಸಹ ಸಂಸ್ಥಾಪಕ !

ದೆಹಲಿ : ವಾಟ್ಸಾಪ್‌ ಸಹ ಸಂಸ್ಥಾಪಕ ಬ್ರಿಯಾನ್‌ ಆಕ್ಟನ್‌ ಫೇಸ್‌ಬುಕ್‌ ಡಿಲೀಟ್ ಮಾಡುವಂತೆ ಸೂಚಿಸಿದ್ದಾರೆ. ಫೇಸ್‌ಬುಕ್‌ 50 ಮಿಲಿಯನ್ ಬಳಕೆದಾರರ ಡೇಟಾವನ್ನು ಅವರ ಅನುಮತಿ ಇಲ್ಲದೆ ಪಡೆದಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈ ಟ್ವೀಟ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
2014ರಲ್ಲಿ ಫೇಸ್‌ಬುಕ್‌ 19 ಬಿಲಿಯನ್ ಡಾಲರ್‌ಗೆ ವಾಟ್ಸಾಪನ್ನು ಕೊಂಡುಕೊಂಡಿತ್ತು. ಫೇಸ್‌ಬುಕ್‌ ವಾಟ್ಸಾಪನ್ನು ಕೊಂಡುಕೊಂಡ ಬಳಿಕವೂ ಬ್ರಿಯಾನ್‌ ಆಕ್ಟನ್‌ ಅದೇ ಹುದ್ದೆಯಲ್ಲಿ ಉಳಿದಿದ್ದರು. ಆದರೆ 2018ರಲ್ಲಿ ಬ್ರಿಯಾನ್‌ ಸಂಸ್ಥೆ ತೊರೆದು ಸಿಗ್ನಲ್‌ ಫೌಂಡೇಶನ್ ಸಂಸ್ಥೆ ಸ್ಥಾಪಿಸಿದ್ದಾರೆ.
ಬ್ರಿಟನ್‌ನ ಕೇಂಬ್ರಿಡ್ಜ್‌ ಎನಲಿಟಿಕಾ, ಫೇಸ್‌ಬುಕ್‌ ಬಳಕೆದಾರರ ಡೇಟಾವನ್ನು ಕದಿಯುತ್ತಿದೆ ಎಂಬ ಆರೋಪದ ಬಳಿಕ ಸಂಸ್ಥೆಯ ಷೇರು ಮೌಲ್ಯ ಕುಸಿತ ಕಂಡಿದೆ ಎಂದುಮ ಮಾಧ್ಯಮಗಳು ವರದಿ ಮಾಡಿವೆ.

 

Leave a Reply

Your email address will not be published.