ಉಗ್ರ ಕೃತ್ಯವೆಸಗಲು ಪಾಕಿಸ್ತಾನದಿಂದ ಸಿಖ್‌ ಯುವಕರಿಗೆ ತರಬೇತಿ !

ದೆಹಲಿ : ಭಾರತದಲ್ಲಿ ದಾಳಿ ನಡೆಸಲು ಪಾಕಿಸ್ತಾನದ ಗೂಢಚರ ಇಲಾಖೆ ಐಎಸ್‌ಐ, ಸಿಖ್‌ ಯುವಕರಿಗೆ ತರಬೇತಿ ನೀಡುತ್ತಿರುವುದಾಗಿ ಸಂಸತ್ತಿನಲ್ಲಿ ಗೃಹ ಸಚಿವಾಲಯ ಮಾಹಿತಿ ನೀಡಿದೆ.
ಕೆನಡಾ ಹಾಗೂ ಇತರೆ ದೇಶಗಳಲ್ಲಿರುವ ಸಿಖ್‌ ಯುವಕರ ಮನಸ್ಸಿನಲ್ಲಿ ವಿಷಬೀಜ ಬಿತ್ತಲಾಗುತ್ತಿದ್ದು, ಭಾರತದ ವಿರುದ್ದ ಎತ್ತಿ ಕಟ್ಟುತ್ತಿದ್ದಾರೆ. ಇದರಿಂದಾಗಿ ಭಾರತಕ್ಕೆ ಆತಂಕ ಎದುರಾಗುವ ಸಾಧ್ಯತೆ ಇರುವುದಾಗಿ ಹೇಳಲಾಗಿದೆ.


ಇದೇ ವೇಳೆ ಸಂಸತ್‌ನಲ್ಲಿ ಮಾತನಾಡಿದ ಬಿಜೆಪಿ ನಾಯಕ ಮುರಳಿ ಮನೋಹರ್ ಜೋಷಿ, ಸೋಶಿಯಲ್‌ ಮೀಡಿಯಾಗಳ ಮೂಲಕ ಯುವಕರನ್ನು ಭಯೋತ್ಪಾದಕ ಗುಂಪುಗಳು ಸೆಳೆಯುತ್ತಿದೆ. ಇದು ದೊಡ್ಡ ಸವಾಲಾಗಿದೆ ಎಂದಿದ್ದಾರೆ.
ಪಂಜಾಬ್‌ ಮಾತ್ರವಲ್ಲದೆ ದೇಶದ ಇತರ ಭಾಗಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಐಎಸ್‌ಐನಿಂದ ತರಬೇತಿ ಪಡೆದ ಉಗ್ರರು ಸಜ್ಜಾಗಿದ್ದಾರೆ. ಪಾಕಿಸ್ತಾನ ಭಾರತದ ಮೇಲಿನ ದಾಳಿಗೆ ಜೈಲಿನಲ್ಲಿರುವ ಕೈದಿಗಳು, ನಿರುದ್ಯೋಗಿಗಳನ್ನು ಬಳಸಿಕೊಳ್ಳುತ್ತಿರುವುದಾಗಿಯೂ ಹೇಳಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com