ಬ್ರಾಹ್ಮಣರಿಗೆ ಪ್ರತ್ಯೇಕ ಧರ್ಮ ಬೇಕಿದ್ದರೆ ಪಡೆದುಕೊಳ್ಳಲಿ : ಸಚಿವ M.B ಪಾಟೀಲ್

ವಿಜಯಪುರ: ಕೆಲ ದಿನಗಳಿಂದ ಬ್ರಾಹ್ಮಣರಿಗೂ ಪ್ರತ್ಯೇಕ ಧರ್ಮ ಪಡೆದುಕೊಳ್ಳುವ ಹಕ್ಕಿದೆ ಎನ್ನುವ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಸಚಿವ ಎಂ.ಬಿ ಪಾಟೀಲ್‌ ಹೇಳಿಕೆ ನೀಡಿದ್ದಾರೆ. ಬ್ರಾಹ್ಮಣರು ಬೇಕಾದ್ರೆ ಪ್ರತ್ಯೇಕ ಧರ್ಮ ಪಡೆದುಕೊಳ್ಳಲಿ. ಬ್ರಾಹ್ಮಣರಿಗೆ ಪ್ರತ್ಯೇಕ ಧರ್ಮ ಕೊಟ್ಟರೆ ತಪ್ಪೇನಿಲ್ಲ. ಅವರು ಹಿಂದೂ ಧರ್ಮದಿಂದ ಹೇಗೆ ವಿಭಿನ್ನ ಅನ್ನೋದನ್ನ ಸಾಬೀತು ಪಡಿಸಬೇಕಾಗುತ್ತದೆ. ಅವರ ದಾಖಲಾತಿಗಳನ್ನ ಸರ್ಕಾರಕ್ಕೆ ಸಲ್ಲಿಸಲಿ ಎಂದಿದ್ದಾರೆ.
ನಾವು ಲಿಂಗಾಯಿತರು ಸಾಬೀತುಪಡಿಸಿದ್ದೇವೆ. ಹಿಂದೂ ಧರ್ಮಕ್ಕಿಂತ ಅವರು ಬೇರೆ ಅಂತ ಸಾಬೀತುಪಡಿಸಲಿ. ಹಾಗೆ ಬ್ರಾಹ್ಮಣರು ಸಾಬೀತು ಪಡಿಸಿದಲ್ಲಿ ಅವರಿಗೆ ಪ್ರತ್ಯೇಕ ಧರ್ಮ‌ ಮಾನ್ಯತೆ ನೀಡೋದ್ರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.
ಜೊತೆಗೆ ಕೇಂದ್ರ ಸರ್ಕಾರ ಪ್ರತ್ಯೇಕ ಧರ್ಮದ ಮಾನ್ಯತೆ ನೀಡದೆ ಇದ್ದರೆ, ಸುಪ್ರಿಂ ಕೋರ್ಟ್ ಮೆಟ್ಟಿಲೇರುತ್ತೇವೆ ಎಂದಿರುವ ಪಾಟೀಲ್, ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಸುಪ್ರೀಂಕೋರ್ಟ್‌ ಮೂಲಕವೇ ಸರ್ಟಿಫಿಕೇಟ್‌ ಪಡೆದುಕೊಳ್ಳುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com