ಮತ್ತೆ ತೆಲುಗು ಸಿನಿಮಾದಿಂದ ಕಿರಿಕ್‌ ಬೆಡಗಿಗೆ ಆಫರ್‌ : ನಾಗಾರ್ಜುನ ಜೊತೆ ರಶ್ಮಿಕಾ ರೊಮ್ಯಾನ್ಸ್‌ ?

ಲಕ್‌ ಅನ್ನೋದು ಯಾರಿಗೆ ಯಾವಾಗ ಒಲಿದು ಬರುತ್ತದೆ ಎಂದು ತಿಳಿಯುವುದಿಲ್ಲ. ಇನ್ನೂ ಕೆಲವರಿಗೆ ಲಕ್‌ ಎಂಬುದೇ ಇರುವುದಿಲ್ಲ. ಆದರೆ ಅದರ ಜೊತೆ ಶ್ರಮ ಇದ್ದರೆ ಖಂಡಿತ ಯಶಸ್ಸು ಸಾಧಿಸಬಹುದು. ಇದಕ್ಕೆ ಸಾಕ್ಷಿ ರಶ್ಮಿಕಾ ಮಂದಣ್ಣ.
ಹೌದು ಕಿರಿಕ್‌ ಪಾರ್ಟಿ ಸಿನಿಮಾದ ಬಳಿಕ ರಶ್ಮಿಕಾ ಮಂದಣ್ಣ ಫುಲ್‌ ಫೇಮಸ್‌ ಆಗಿದ್ದಾರೆ. ಗೋಲ್ಡನ್‌ ಸ್ಟಾರ್‌ ಗಣೇಶ್ ಜೊತೆ ಕಿರಿಕ್‌, ಪುನೀತ್‌ ರಾಜ್‌ ಕುಮಾರ್ ಜೊತೆ ಅಂಜನೀಪುತ್ರ ಸಿನಿಮಾದಲ್ಲಿ ಅಭಿನಯಿಸಿದ್ದರು.


ಅಲ್ಲದೆ ತೆಲುಗಿನ ಚಲೋ ಸಿನಿಮಾದಲ್ಲೂ ರಶ್ಮಿಕಾ ಅಭಿನಯಿಸಿದ್ದರು. ಆದರೆ ಈಗ ಮತ್ತೆ ತೆಲುಗಿನಿಂದ ರಶ್ಮಿಕಾಗೆ ಆಫರ್ ಬಂದಿದ್ದು, ನಾಗಾರ್ಜುನ ಅವರ ಜೊತೆ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ರಶ್ಮಿಕಾ ಸಹ ಒಪ್ಪಿಗೆ ಸೂಚಿಸಿರುವುದಾಗಿ ತಿಳಿದುಬಂದಿದೆ.
ನಾಗಾರ್ಜುನ ಜೊತೆ ರಶ್ಮಿಕಾ ಯಾವ ರೀತಿ ಕಾಣುತ್ತಾರೆ ಎಂಬುದನ್ನು ನೋಡಲು ನಾಗಾರ್ಜುನ ಹಾಗೂ ರಶ್ಮಿಕಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವುದಂತೂ ಸತ್ಯ. ಅದೇನೇ ಆಗಲಿ, ರಶ್ಮಿಕಾ-ನಾಗಾರ್ಜುನ ಅವರ ಸಿನಿಮಾ ಆದಷ್ಟು ಬೇಗ ಸಿನಿರಸಿಕರಿಗೆ ಹಬ್ಬದೂಟ ನೀಡಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com