ಕರಿ ಕಾಲಾನ ಎಂಟ್ರಿಗೆ ಫಿಕ್ಸ್ ಆಯ್ತು Date : ಹೆಚ್ಚಾಗುತ್ತಿದೆ ರಜಿನಿ ಅಭಿಮಾನಿಗಳ ಕ್ರೇಜ್‌

ಚೆನ್ನೈ : ತಮಿಳುನಾಡಿನ ಸೂಪರ್ ಸ್ಟಾರ್‌ ರಜಿನೀಕಾಂತ್‌ ಅವರ ಮುಂದಿನ ಕಾಲಾ ಸಿನಿಮಾದ ರಿಲೀಸ್‌ ಡೇಟ್‌ ಫಿಕ್ಸ್ ಆಗಿದೆ. ಕಾಲಾನ ಮೊದಲ ಟೀಸರ್ ನೋಡಿದ ಅಭಿಮಾನಿಗಳು ಸಿನಿಮಾದ ರಿಲೀಸ್‌ಗಾಗಿ ಕಾಯುತ್ತಿದ್ದರು. ಈಗ ಡೇಟ್‌ ಸಹ ಫಿಕ್ಸ್ ಆಗಿದ್ದು, ಅಭಿಮಾನಿಗಳ ಕ್ರೇಜ್‌ ಮತ್ತಷ್ಟು ಹೆಚ್ಚಿದೆ.

ಕಬಾಲಿ ನಿರ್ದೇಶಕ ಪ. ರಂಜಿತ್‌ ನಿರ್ದೇಶನದ ಈ ಸಿನಿಮಾ ಏಪ್ರಿಲ್‌ 27ರಂದು ವಿಶ್ವದಾದ್ಯಂತ ರಿಲೀಸ್‌ ಆಗುತ್ತಿದೆ. ಈ ದಿನಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಕಳೆದ ವರ್ಷ ರಜಿನೀಕಾಂತ್ ಅಭಿನಯದ ಕಬಾಲಿ ಬಿಡುಗಡೆಯಾಗಿದ್ದು, ಅಭಿಮಾನಿಗಳ ನಿರೀಕ್ಷೆಯಂತಿರಲಿಲ್ಲ ಎಂಬ ಮಾತು ಕೇಳಿಬಂದಿತ್ತು. ಆದರೆ ಈ ಬಾರಿ ಕಾಲಾ ಸಖತ್ತಾಗಿ ಎಂಟ್ರಿ ಕೊಡುತ್ತಾನೆ ಎಂಬ ನಂಬಿಕೆಯೊಂದಿಗೆ ಅಭಿಮಾನಿಗಳು ಕಾಯುತ್ತಿರುವುದಂತೂ ಸತ್ಯ

 

Leave a Reply

Your email address will not be published.