ರಾಹುಲ್‌ ಗಾಂಧಿಯ ಮಾತನ್ನು ಕೇಳಿ ತನ್ನ ಹುದ್ದೆಗೇ ರಾಜೀನಾಮೆ ನೀಡಿದ ಕೈ ನಾಯಕ !

ಲಖನೌ : ರಾಜಕಾರಣದಲ್ಲಿ ಯುವಕರಿಗೆ ಹೆಚ್ಚು ಅವಕಾಶ ನೀಡಬೇಕು ಎಂಬ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕರೆನೀಡಿದ್ದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ಗೋವಾ ಕಾಂಗ್ರೆಸ್‌ ಅಧ್ಯಕ್ಷ ಶಾಂತಾರಾಮ್ ನಾಯಕ್‌ ರಾಜೀನಾಮೆ ನೀಡಿದ್ದು. ಇದರ ಬೆನ್ನಲ್ಲೇ ಉತ್ತರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ರಾಜ್‌ ಬಬ್ಬರ್ ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಅವರ ರಾಜೀನಾಮೆ ಪತ್ರವನ್ನು ಪಕ್ಷ ಪರಿಗಣಿಸಿಲ್ಲ ಎಂದು ತಿಳಿದುಬಂದಿದೆ.


ಉತ್ತರ ಪ್ರದೇಶದ ಗೋರಕ್ ಪುರ ಹಾಗೂ ಫುಲ್ಪರ್‌ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಕಳಪೆ ಪ್ರದರ್ಶನದ ಬಳಿಕ ಈ ವಿದ್ಯಾಮಾನ ನಡೆದಿದೆ. ರಾಜ್‌ ಬಬ್ಬರ್‌ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಜಿತಿನ್ ಪ್ರಸಾದ್‌, ರಾಜೇಶ್ ಮಿಶ್ರಾ ಅಥವಾ ಲಲಿತೇಶ್ವರಿ ತ್ರಿಪಾಠಿ ಅವರನ್ನು ನೇಮಿಸುವ ಸಾಧ್ಯತೆ ಇದೆ.
ಆದರೆ ರಾಜ್‌ ಬಬ್ಬರ್‌ ರಾಜೀನಾಮೆ ಕುರಿತು ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ ಎಂದು ತಿಳಿದುಬಂದಿದೆ.

Leave a Reply

Your email address will not be published.