ಮದುವೆ ಮಾಡ್ಕೋ ಅಂದಿದ್ದೇ ತಪ್ಪಾಯ್ತು, ಇದಕ್ಕೊಪ್ಪದ ಪ್ರೇಮಿ ಮಾಡಿದ್ದೇನು ?

ಬೆಳಗಾವಿ : ಮದುವೆಗೆ ಒತ್ತಾಯಿಸಿದ್ದಕ್ಕೆ ಪ್ರೇಯಸಿಯನ್ನು ರೈಲಿನಿಂದ ತಳ್ಳಿ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮೃತ ಯುವತಿಯನ್ನು ಪೂನಂ ಎಂದು ಹೆಸರಿಸಲಾಗಿದೆ. ಮಾರ್ಚ್‌ 15ರಂದು ರೈಲ್ವೇ ಸೇತುವೆ ಬಳಿ ಪೂನಂ ಮೃತದೇಹ ಪತ್ತೆಯಾಗಿದೆ. ಪ್ರಕರಣ ಸಂಬಂಧ ಪೂನಂ ಪೋಷಕರು ದೂರು ನೀಡಿದ್ದರು. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
ಡಾಕ್ಟರೊಬ್ಬ ಪೂನಂಳನ್ನು ಪ್ರೀತಿಸುತ್ತಿದ್ದು. ಇತ್ತೀಚೆಗೆ ಪೂನಂ ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಪೀಡಿಸುತ್ತಿದ್ದಳು. ಆದರೆ ಸುನಿಲ್‌ ಮನೆಯಲ್ಲಿ ಅಂತರ್ಜಾತಿ ವಿವಾಹಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಮದುವೆ ನಿರಾಕರಿಸಿದ್ದ. ಮತ್ತೆ ಮತ್ತೆ ಪೂನಂ ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಸುನಿಲ್‌ ಹಾಗೂ ಆತನ ಸಹೋದರ ಸೇರಿ ಪೂನಂಳನ್ನು ಗೋವಾ ಪ್ರವಾಸಕ್ಕೆಂದು ಕರೆದಿದ್ದು ಬಳಿಕ ರೈಲಿನಿಂದ ತಳ್ಳಿ ಹತ್ಯೆ ಮಾಡಿದ್ದಾನೆ.
ಸದ್ಯ ಪೊಲೀಸರು ಸಂಜಯ್ ಹಾಗೂ ಸುನಿಲ್‌ನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com