‘ನನ್ನನ್ನು ಧೋನಿಯೊಂದಿಗೆ ಹೋಲಿಸಬೇಡಿ’ ಎಂದ ಕಾರ್ತಿಕ್ : DK ಹೀಗೆ ಹೇಳಿದ್ದೇಕೆ.?

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನಲ್ಲಿ ಅತ್ಯುತ್ತಮ ಗೇಮ್ ಫಿನಿಷರ್ ಒಬ್ಬರು ಎಂದು ಹೆಸರಾಗಿದ್ದಾರೆ. ಧೋನಿ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ ನಿದಾಹಾಸ್ ಟ್ರೋಫಿ ಆಡಲು ಶ್ರೀಲಂಕಾಗೆ ತೆರಳಿದ್ದರು.

ಅಲ್ಲದೇ ತ್ರಿಕೋನ ಸರಣಿಯಲ್ಲಿ ದಿನೇಶ್ ಕಾರ್ತಿಕ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಬಾಂಗ್ಲಾದೇಶ ವಿರುದ್ಧ ಕೋಲಂಬೋದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಕಾರ್ತಿಕ್ ಗೆಲುವು ತಂದು ಕೊಟ್ಟಿದ್ದರು. ಪಂದ್ಯದ ನಂತರ ಸಾಮಾಜಿಕ ಜಾಲತಾಣದಲ್ಲಿ ಕಾರ್ತಿಕ್ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು.

ಈ ಸಂದರ್ಭದಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ಧೋನಿ ಬಗ್ಗೆ ಮಾತನಾಡಿದ್ದಾರೆ. ‘ ಗೇಮ್ ಫಿನಿಷಿಂಗ್, ಟಾರ್ಗೆಟ್ ಚೇಸಿಂಗ್ ವಿಷಯಕ್ಕೆ ಬಂದಾಗ ಧೋನಿ ಯೂನಿವರ್ಸಿಟಿ ಟಾಪರ್ ನಂತೆ ಇದ್ದರೆ, ನಾನಿನ್ನೂ ಕಲಿಯುತ್ತಿರುವ ವಿದ್ಯಾರ್ಥಿಯಾಗಿದ್ದೇನೆ. ನಾನು ಯಾವಾಗಲೂ ಧೋನಿ ಅವರಿಂದ ಕಲಿಯಲು ಯತ್ನಿಸುತ್ತೇನೆ. ಧೋನಿ ಅವರನ್ನು ನನ್ನೊಂದಿಗೆ ಹೋಲಿಸುವುದು ತಪ್ಪಾಗುತ್ತದೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com