ನಂಬಿದವರನ್ನು ಮುಗಿಸುವುದೇ HDK ಹಾಗೂ ದೇವೇಗೌಡರ ಕೆಲಸ : ಜಮೀರ್ ಅಹ್ಮದ್

ಮೈಸೂರಲ್ಲಿ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದು ‘ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ್ರು ಹಾಗೂ ಕುಮಾರಸ್ವಾಮಿ ಕೆಲಸವೇ ನಂಬಿದವರನ್ನ ಮುಗಿಸುವುದು. ಅದನ್ನೇ ಮಾಡಿಕೊಂಡು ಬರುತ್ತಿದ್ದಾರೆ. ನನಗೆ ಬೇರೆಯವರಿಂದ‌ ಬೆದರಿಕೆ ಹಾಕಿಸುತ್ತಿದ್ದಾರೆ. ಅವರ ಬೆದರಿಕೆಗೆ ನಾನು ಬಗ್ಗುವುದಿಲ್ಲ ‘

‘ ಪುನಃಪಕ್ಷಕ್ಕೆ‌ ಬರುವಂತೆ ಹೇಳುತ್ತಿದ್ದಾರೆ. ನಾನು ಯಾವುದೆ ಕಾರಣಕ್ಕೂ ಮತ್ತೆ ಜೆಡಿಎಸ್ ಗೆ ಹೋಗುವುದಿಲ್ಲ. ನಾನು ಈಗಾಗಲೇ ಕಾಂಗ್ರೆಸ್ ಜೊತೆ ಇದ್ದೇನೆ. ರಾಹುಲ್ ಗಾಂಧಿ ಹಾಗೂ ಸಿಎಂ‌ಸಿದ್ದರಾಮಯ್ಯ ನವರ ಸಮ್ಮುಖದಲ್ಲಿ ಇದೇ ತಿಂಗಳು 25 ರಂದು ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತೇನೆ ‘ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com