Cricket : ಐಪಿಎಲ್‍ನಲ್ಲಿ ಹೊಸ ಹೇರ್ ಸ್ಟೈಲ್‍ನಲ್ಲಿ ಮಿಂಚಲಿದ್ದಾರೆ ಕೊಹ್ಲಿ..!

ಮುಂಬರುವ ಏಪ್ರಿಲ್ 7 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ನ 11ನೇ ಸೀಸನ್ ಶುರುವಾಗಲಿದೆ. ಕ್ರಿಕೆಟ್ ಅಭಿಮಾನಿಗಳಲ್ಲಿ ಟಿ20 ಟೂರ್ನಿಯ ಬಗೆಗೆ ಕುತೂಹಲ, ಕಾತರ ಹೆಚ್ಚಾಗುತ್ತಿದ್ದು, ತಮ್ಮ ತಮ್ಮ ತಂಡಗಳನ್ನು ಪ್ರೋತ್ಸಾಹಿಸಲು ಅಣಿಯಾಗುತ್ತಿದ್ದಾರೆ.

ಈ ವಿಷಯದಲ್ಲಿ ಅತ್ತ ಕ್ರಿಕೆಟಿಗರೂ ಹಿಂದೆ ಬಿದಿಲ್ಲ. ಟೀಮ್ ಇಂಡಿಯಾ ನಯಕ ವಿರಾಟ್ ಕೊಹ್ಲಿ ಕೇವಲ ತಮ್ಮ ಬ್ಯಾಟಿಂಗ್ ಮಾತ್ರವಲ್ಲ, ಸ್ಟೈಲ್ ಗೂ ಹೆಸರಾದವರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿರುವ ಕೊಹ್ಲಿ, ಈ ಬಾರಿಯ ಐಪಿಎಲ್ ನಲ್ಲಿ ಹೊಸ ಕೇಶ ವಿನ್ಯಾಸದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ಹೊಸ ಕೇಶ ವಿನ್ಯಾಸ ಮಾಡಿಕೊಳ್ಳುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ವಿರಾಟ್ ಕೊಹ್ಲಿಯ ಹೊಸ ಕೇಶ ವಿನ್ಯಾಸವನ್ನು ಮುಂಬೈನ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಎನ್ನುವವರು ಸಿದ್ಧಪಡಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com