Afghanistan : ಕಾಬೂಲ್ ನಲ್ಲಿ ಸೂಸೈಡ್ ಬಾಂಬ್ ದಾಳಿ : 26 ಜನರ ದುರ್ಮರಣ

ಅಫಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಬುಧವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 26 ಜನರು ದುರ್ಮರಣ ಹೊಂದಿದ್ದು, 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಬುಧವಾರ ಮಧ್ಯಾಹ್ನ ಸುಮಾರು 1.30 ರ ಹೊತ್ತಿಗೆ ಕಾಬೂಲ್ ವಿಶ್ವ ವಿದ್ಯಾಲಯದ ಬಳಿಯಲ್ಲಿ ಉಗ್ರನೋರ್ವ ತನ್ನನ್ನೇ ಸ್ಫೋಟಿಸಿಕೊಂಡಿದ್ದಾನೆ. ಕಾಬೂಲ್ ನಗರದ ಪಶ್ಚಿಮ ಭಾಗದಲ್ಲಿ ಶಿಯಾ ಸಮುದಾಯದ ಧಾರ್ಮಿಕ ಕೇಂದ್ರದ ಬಳಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ. ರಾಜಧಾನಿ ಕಾಬೂಲ್ ನಗರದೆಲ್ಲೆಡೆ ಪರ್ಶಿಯನ್ ಹೊಸ ವರ್ಷ ನವರೂಜ್ ಅನ್ನು ಆಚರಿಸಲಾಗುತ್ತಿತ್ತು.

Leave a Reply

Your email address will not be published.