ಟಿ. ನರಸೀಪುರ ಕ್ಷೇತ್ರದಲ್ಲಿ ಅಪ್ಪ-ಮಗನ ನಡುವೆ ಕಾಂಗ್ರೆಸ್‌ ಟಿಕೆಟ್‌ಗಾಗಿ ಫೈಟ್‌ !

ಮೈಸೂರು : ಟಿ.ನರಸೀಪುರ ಕಾಂಗ್ರೆಸ್ ಅಭ್ಯರ್ಥಿಯ ವಿಚಾರದಲ್ಲಿ ಗೊಂದಲ ಏರ್ಪಟ್ಟಿದ್ದು, ಒಂದೇ ಕ್ಷೇತ್ರದಲ್ಲಿ ಅಪ್ಪ-ಮಗ ಇಬ್ಬರು ಟಿಕೆಟ್‌ಗಾಗಿ ಹಣಾಹಣಿ ನಡೆಸಿದ್ದಾರೆ.
ಹೌದು ಸಚಿವ ಎಚ್‌. ಸಿ ಮಹದೇವಪ್ಪ ಹಾಗೂ ಅವರ ಪುತ್ರ ಸುನಿಲ್‌ ಬೋಸ್‌ ಇಬ್ಬರೂ ನರಸೀಪುರ ಕ್ಷೇತ್ರದ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಈ ಬಗ್ಗೆ ಸುನಿಲ್‌ ಬೋಸ್‌ ಪ್ರತಿಕ್ರಿಯಿಸಿದ್ದು, ನಾನು, ತಂದೆ ಇಬ್ಬರೂ ಟಿ.ನರಸೀಪುರ ಕ್ಷೇತ್ರದ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದೇವೆ.ಯಾರಿಗೆ ಟಿಕೆಟ್ ಕೊಡಬೇಕೆಂಬುದು ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರ. ತಂದೆ – ಮಗನಲ್ಲಿ ಯಾವ ಗೊಂದಲ ಇರಲು ಸಾಧ್ಯ..? ನಮ್ಮಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದಿದ್ದಾರೆ.


ನಂಜನಗೂಡಿಗೆ ಶಾಸಕ ಕಳಲೆ ಕೇಶವಮೂರ್ತಿ ಅವರೇ ಅಭ್ಯರ್ಥಿ ಎಂದು ಸಿಎಂ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ನಾನು ಸಿ.ವಿ.ರಾಮನ್ ನಗರ ಕ್ಷೇತ್ರಕ್ಕೆ ಅರ್ಜಿ ಹಾಕಿಲ್ಲ. ಗ್ರಾಮಾಂತರ ಪ್ರದೇಶ ಬಿಟ್ಟು ನಗರ ಪ್ರದೇಶಕ್ಕೆ ಹೋಗಲು ಇಷ್ಟವಿಲ್ಲ ಎಂಬ ಕಾರಣಕ್ಕೆ ತಂದೆಯವರೂ ಸಿ.ವಿ.ರಾಮನ್ ನಗರ ಕ್ಷೇತ್ರಕ್ಕೆ ಟಿಕೆಟ್ ಹಾಕಿಲ್ಲ. ಇಬ್ಬರೂ ಟಿ.ನರಸೀಪುರ ಕ್ಷೇತ್ರಕ್ಕೆ ಮಾತ್ರ ಅರ್ಜಿ ಹಾಕಿದ್ದೇವೆ. ಪಕ್ಷ ನನಗೆ ಟಿಕೆಟ್ ಕೊಟ್ಟು ತಂದೆ ಅವರಿಗೆ ಬೇರೆ ಜವಾಬ್ದಾರಿ ಕೊಟ್ಟರೆ ನಿರ್ವಹಿಸುತ್ತಾರೆ. ನನಗೆ ವಯಸ್ಸಿರುವ ಕಾರಣಕ್ಕಾಗಿ ಕಾರ್ಯಕರ್ತನಾಗಿ ಕೆಲಸ ಮಾಡು ಎಂದರೂ ಮಾಡುತ್ತೇನೆ ಎಂದು ಸುನಿಲ್‌ ಬೋಸ್‌ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com