ತಾಯಿಯ ಎದುರೇ ಸ್ಯಾಂಡಲ್‌ವುಡ್‌ ನಟಿಗೆ ಈ ನಿರ್ಮಾಪಕ ಮಾಡಿದ್ದೇನು ?

ಬೆಂಗಳೂರು : ಸ್ಯಾಂಡಲ್‌ವುಡ್‌ನ ಮತ್ತೊಂದು ಸ್ಫೋಟಕ ಸುದ್ದಿ ಬಯಲಾಗಿದೆ. ನಿರ್ಮಾಪಕನೊಬ್ಬನ ವಿರುದ್ಧ ನಟಿ ಮೇಘನಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.
ಸಿನಿಮಾ ನಿರ್ಮಾಪಕ ಜಗದೀಶ್‌ ಎಂಬುವವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಮೇಘನಾ ದೂರಿನಲ್ಲಿ ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ದೇವರಗುಡ್ಡ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಈ ಸಿನಿಮಾದಲ್ಲಿ ಐವರು ನಾಯಕಿಯರಿದ್ದು ಅದರಲ್ಲಿ ಮೇಘನಾ ಸಹ ಒಬ್ಬರಾಗಿದ್ದರು. ಮೇಘನಾ ದಿನನಿತ್ಯ ಶೂಟಿಂಗ್‌ಗೆ ಲೇಟಾಗಿ ಬರುತ್ತಿದ್ದು, ಇದನ್ನು ಜಗದೀಶ್ ಪ್ರಶ್ನಿಸಿದ್ದಾರೆ. ಅಲ್ಲದೆ ಮೇಘನಾ ತಾಯಿಯ ಎದುರೇ ಹಲ್ಲೆ ಮಾಡಿರುವುದಾಗಿ ಮೇಘನಾ ಆರೋಪಿಸಿದ್ದಾರೆ. ಮಹಿಳೆಯರ ಮೇಲೆ ಹಲ್ಲೆ ನಡೆಸುವುದೂ ಲೈಂಗಿಕ ದೌರ್ಜನ್ಯ ಆಗುವುದರಿಂದ ನಿರ್ಮಾಪರನ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com