30 ವರ್ಷ ದುಡಿದರೂ ನಮ್ಮನ್ನು ಕಡೆಗಣಿಸಲಾಗಿದೆ : ಕಾಂಗ್ರೆಸ್‌ ವಿರುದ್ದ ಗುಡುಗಿದ ರಮ್ಯಾ ತಾಯಿ !

ಮಂಡ್ಯ : ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರ ತಾಯಿ ರಂಜಿತಾ ಕಾಂಗ್ರೆಸ್ ಪಕ್ಷದ ವಿರುದ್ಧ ಗರಂ ಆಗಿದ್ದು, ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಳಿದುಬಂದಿದೆ. ಇನ್ನೊಂದು ವಾರದೊಳಗೆ ಈ ಬಗ್ಗೆ ಸ್ಪಷ್ಟನೆ ದೊರೆಯಲಿದೆ.
ಕಳೆದ 30 ವರ್ಷಗಳಿಂದಿ ಕಾಂಗ್ರೆಸ್‌ಗಾಗಿ ದುಡಿದಿದ್ದೇನೆ. 1980ರಲ್ಲಿ 2 ರೂ ಕೊಟ್ಟು ಕಾಂಗ್ರೆಸ್‌ ಸದಸ್ಯತ್ವ ಪಡೆದುಕೊಂಡಿದ್ದೆ. ಅಂದಿನಿಂದಲೂ ಕಾಂಗ್ರೆಸ್‌ಗಾಗಿ ಮನೆ ಮನೆಗೆ ಸುತ್ತಿದ್ದೇನೆ. ಆದರೆ ಕಾಂಗ್ರೆಸ್‌ ನನ್ನನ್ನು ಕಡೆಗಣಿಸಿದೆ ಎಂದು ರಂಜಿತಾ ಆರೋಪಿಸಿದ್ದಾರೆ.


ರಮ್ಯಾ ಸೋತ ಬಳಿಕ ಅವಳಿಗೆ ಯಾವುದೇ ಸ್ಥಾನಮಾನ ನೀಡಲಿಲ್ಲ. ರಮ್ಯಾಳನ್ನೂ ಕಡೆಗಣಿಸಲಾಗಿದೆ. ಈ ನೋವು ರಮ್ಯಾಗೂ ಇದೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ.
ಜನರು ನನ್ನ ಮೇಲೆ ನಂಬಿಕೆ ಇಟ್ಟುಆಶಿರ್ವಾದ ಮಾಡಿದರೆ ಅವರಿಗಾಗಿ ದುಡಿಯುತ್ತೇನೆ. ಕಾಂಗ್ರೆಸ್‌ನಿಂದಲೇ ನಾನು ಟಿಕೆಟ್ ಕೇಳುತ್ತಿದ್ದೆ. ಆದರೆ ಅಂಬರೀಶ್ ಚುನಾವಣೆಗೆ ನಿಲ್ಲುತ್ತಿರುವ ಹಿನ್ನೆಲೆಯಲ್ಲಿ ಪಕ್ಷೇತರಳಾಗಿ ನಿಲ್ಲುತ್ತೇನೆ. ಆದರೆ ಈ ಬಗ್ಗೆ ರಮ್ಯಾ ಜೊತೆ ಚರ್ಚಿಸಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com