ಆತಿಥೇಯರ ಮನಗೆದ್ದ ಟೀಮ್ ಇಂಡಿಯಾ : ರೋಹಿತ್ ಲಂಕಾ ಧ್ವಜ ಹಿಡಿದು ಮೈದಾನ ಸುತ್ತಿದ್ದೇಕೆ..?

ಕೋಲಂಬೋದಲ್ಲಿ ಭಾನುವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 4 ವಿಕೆಟ್ ಗಳಿಂದ ಮಣಿಸಿದ ಟೀಮ್ ಇಂಡಿಯಾ ನಿದಾಹಾಸ್  ಟಿ20 ತ್ರಿಕೋನ ಸರಣಿಯನ್ನು ಗೆದ್ದು ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.

ಪಂದ್ಯದ ಪ್ರಶಸ್ತಿ ವಿತರಣೆ ಸಮಾರಂಭ ಮುಕ್ತಾಯಗೊಂಡ ಬಳಿಕ ನಾಯಕ ರೋಹಿತ್ ಶರ್ಮಾ ಹಾಗೂ ಟೀಮ್ ಇಂಡಿಯಾದ ಆಟಗಾರರು ಶ್ರೀಲಂಕಾ ಧ್ವಜವನ್ನು ಕೈಯಲ್ಲಿ ಎತ್ತಿ ಹಿಡಿದು ಪ್ರೇಮದಾಸಾ ಮೈದಾನದ ತುಂಬ ಸುತ್ತು ಹಾಕಿದರು. ಹೀಗೆ ಮಾಡಿರುವುದಕ್ಕೆ ಹಿನ್ನೆಲೆಯೂ ಇದೆ.

ಶ್ರೀಲಂಕಾ ದೇಶ ಸ್ವಾತಂತ್ರ್ಯವನ್ನು ಪಡೆದು 70 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ನಿದಾಹಾಸ್ ಟ್ರೋಫಿಯನ್ನು ಆಯೋಜಿಸಲಾಗಿತ್ತು. 70ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವ ಶ್ರೀಲಂಕಾ ದೇಶದ ನಾಗರಿಕರಿಗೆ ಅಭಿನಂದನೆಗಳನ್ನು ಸಲ್ಲಿಸುವ ಉದ್ದೇಶದಿಂದ ರೋಹಿತ್ ಹಾಗೂ ಭಾರತದ ಕ್ರಿಕೆಟಿಗರು ಲಂಕಾ ಧ್ವಜವನ್ನು ಹಿಡಿದು ಸುತ್ತಿದರು. ಟೀಮ್ ಇಂಡಿಯಾ ಕ್ರಿಕೆಟಿಗರ ಈ ನಡೆ ಅಸಂಖ್ಯ ಶ್ರೀಲಂಕಾ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ.

One thought on “ಆತಿಥೇಯರ ಮನಗೆದ್ದ ಟೀಮ್ ಇಂಡಿಯಾ : ರೋಹಿತ್ ಲಂಕಾ ಧ್ವಜ ಹಿಡಿದು ಮೈದಾನ ಸುತ್ತಿದ್ದೇಕೆ..?

  • March 20, 2018 at 8:39 PM
    Permalink

    That’s called a real team spirit…. This one s the thing a captain should do…. Congrats team India……… ☺☺☺☺☺☺

    Reply

Leave a Reply

Your email address will not be published.

Social Media Auto Publish Powered By : XYZScripts.com