ಕನಕದಾಸರು ಸಮಾಜ ಜೋಡಿಸಿದರು, ಸಿದ್ದರಾಮಯ್ಯ ಒಡೆಯುತ್ತಿದ್ದಾರೆ : ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ : ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿಕೆ ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ ಕನಕದಾಸರು ಸಮಾಜ ಜೋಡಿಸಿದ್ರು. ಸಿದ್ದರಾಮಯ್ಯ ಸಮಾಜ ಒಡೆಯುತ್ತಿದ್ದಾರೆ. ಜಾತಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಕುತಂತ್ರ ರಾಜಕಾರಣ ಬಯಲಾಗಿದೆ. ರಾಜ್ಯದ ಆರೂವರೆ ಕೋಟಿ ಜನ ಸಿದ್ದರಾಮಯ್ಯ ಗೆ ಪಾಠ ಕಲಿಸ್ತಾರೆ ‘

‘ ಚುನಾವಣೆಯಲ್ಲಿ ಸಿದ್ದರಾಮಯ್ಯನ್ನ ಮನೆಗೆ ಕಳಿಸ್ತಾರೆ. ವೀರಶೈವ – ಲಿಂಗಾಯತ ವಿಚಾರದಲ್ಲಿ ರಾಜ್ಯದಲ್ಲಿ ಗೊಂದಲವಿದೆ. ಮಠಾಧೀಶರಿಗೂ ಸಿದ್ದರಾಮಯ್ಯ ಗೊಂದಲ ಉಂಟು ಮಾಡಿದ್ದಾರೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತು ಸತ್ಯನಾ.. ವಿನಯ್ ಕುಲಕರ್ಣಿ ಹೇಳಿರೋದು ಸತ್ಯನೋ.. ಸಿಎಂ ಸ್ಪಷ್ಟಪಡಿಸಲಿ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com