ಇರಾಕಿನಲ್ಲಿ ಒತ್ತೆಯಾಳಾಗಿದ್ದ 39 ಭಾರತೀಯರನ್ನು ISIS ಹತ್ಯೆ ಗೈದಿದೆ : ಸುಷ್ಮಾ ಸ್ವರಾಜ್

2014 ರಿಂದ ಇರಾಕಿನ ಮೋಸೂಲ್ ನಲ್ಲಿ ನಾಪತ್ತೆಯಾಗಿದ್ದ 39 ಭಾರತೀಯ ನಾಗರಿಕರನ್ನು ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಹತ್ಯೆಗೈದಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜ್ಯಸಭೆಯಲ್ಲಿ ಮಂಗಳವಾರ ಹೇಳಿದ್ದಾರೆ. ಅವರೆಲ್ಲ ಬದುಕಿದ್ದಾರೆ ಎಂದು ಕಳೆದ ವರ್ಷ ಅಕ್ಟೋಬರ್ ವರೆಗೆ ಸುಷ್ಮಾ ಹೇಳಿಕೆ ನೀಡುತ್ತಿದ್ದರು.

‘ ಒಟ್ಟು 40 ಜನ ಭಾರತೀಯ ನಾಗರಿಕರನ್ನು ಅಪಹರಣ ಮಾಡಲಾಗಿತ್ತು. ಒಬ್ಬ ವ್ಯಕ್ತಿ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದ. ಆದರೆ ಉಳಿದ 39 ಜನರನ್ನು ಐಸಿಸ್ ಕೊಲೆಗೈದಿದೆ ‘ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.

‘ ಫಾರೆನ್ಸಿಕ್ ಪರೀಕ್ಷೆ ಮಾಡಲು ಅಪಹರಣಕ್ಕೆ ಒಳಗಾದವರ ಸಂಬಂಧಿಕರ ಡಿಎನ್ಎ ಸ್ಯಾಂಪಲ್ ಗಳನ್ನು ಕಳಿಸಲಾಗಿತ್ತು. 38 ಜನ ಮೃತರ ದೇಹದ ಡಿಎನ್ಎ ಸಂಬಂಧಿಕರ ಡಿಎನ್ ಎ ಜೊತೆ ಹೊಂದಿಕೆಯಾಗಿವೆ. ಜನರಲ್ ವಿಕೆ ಸಿಂಗ್ ಇರಾಕಿಗೆ ತೆರಳಿ ಮೃತರ ಅವಶೇಷವನ್ನು ವಾಪಸ್ ತರಲಿದ್ದಾರೆ. ಅವಶೇಷಗಳನ್ನು ತರಲಿರುವ ವಿಮಾನ ಅಮೃತಸರ, ಪಾಟ್ನಾ ಹಾಗೂ ಕೋಲ್ಕತಾಗೆ ಬರಲಿದೆ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com