ಹೆಂಡತಿ ವಿಚ್ಛೇದನ ನೀಡ್ಲಿಲ್ಲ ಅಂತ ಮಾಧ್ಯಮದವರೆದುರು ಈತ ಅದೆಂಥಾ ಕೆಲಸ ಮಾಡ್ಬಿಟ್ಟ !

ಕಲಬುರ್ಗಿ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಗೆ ವಿಚ್ಛೇದನ ನೀಡಲು ಅರ್ಜಿ ಹಾಕಿದರೂ ನ್ಯಾಯಾಲಯ ವಿಚ್ಛೇದನ ನೀಡದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ವಿಷ ಸೇವಿಸಿದ ಘಟನೆ ಕಲಬುರಗಿಯ ಪತ್ರಿಕಾ ಭವನದಲ್ಲಿ ನಡೆದಿದೆ.

ವಿಷ ಸೇವಿಸಿದ ವ್ಯಕ್ತಿಯನ್ನು ಶರಣಬಸಪ್ಪ ತಂದೆ ಲಾಡಪ್ಪ ಮಾನೆ ಎಂದು ಹೆಸರಿಸಲಾಗಿದೆ. ಶರಣಬಸಪ್ಪ, ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ನಿವಾಸಿಯಾಗಿದ್ದು, ಈತ ಹಾಗೂ ಈತನ ಪತ್ನಿ ಮಧ್ಯೆ ಜಗಳ ನಡೆದಿತ್ತು. ಕೋರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದರೂ ಡೈವರ್ಸ್ ಕೊಟ್ಟಿರಲಿಲ್ಲ. ಅಲ್ಲದೆ ಡೈವರ್ಸ್ ನೀಡುವಂತೆ ಹಲವು ವರ್ಷಗಳಿಂದ ಕೋರ್ಟ್ ಅಲೆದು ಈತ ಬೇಸತ್ತಿದ್ದ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸುತ್ತಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೆ ಪತ್ರಕರ್ತರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com