ಸಿಎಂ ಸಿದ್ದರಾಮಯ್ಯ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ : ತೋಂಟದ ಸಿದ್ಧಲಿಂಗ ಶ್ರೀ

ಗದಗ : ಲಿಂಗಾಯತ, ವೀರಶೈವ ಧರ್ಮ ವಿಚಾರವಾಗಿ ಗದಗಿನ ತೋಂಟದ ಸಿದ್ಧಲಿಂಗ ಶ್ರೀಗಳು ಪ್ರತಿಕ್ರಿಯೆ ನೀಡಿದ್ದು, ‘ ಗಂಭೀರ ಧಾರ್ಮಿಕ ಸಮಸ್ಯೆ ರಾಜಕೀಯವಾಗಿ ಎತ್ತುಕೊಂಡು ಅದ್ಭುತವಾಗಿ ನಿಭಾಯಿಸಲಾಗಿದೆ. 900 ವರ್ಷದಲ್ಲಿ ಸಿಗದ ಬಂಪರ್ ಕೊಡುಗೆ ಈ ಯುಗಾದಿಗೆ ಸರ್ಕಾರ ನೀಡಿದೆ ‘ ಎಂದು ಹೇಳಿದ್ದಾರೆ.

‘ ಕರ್ನಾಟಕ ಗ್ರಾಮ ಚರಿತ್ರಾ ಕೋಶ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಹೇಳಿಕೆ ನೀಡಿರುವ ಶ್ರೀಗಳು ‘ ಇಡೀ ಗೊಂದಲಕ್ಕೆ ನಾಗಮೋಹನ್ ಸಮಿತಿ ಮೂಲಕ ಸರ್ಕಾರ ಗೊಂದಲಕ್ಕೆ ತೆರೆ ಎಳೆದಿದೆ. ಸಿಎಮ್ ಸಿದ್ದರಾಮಯ್ಯ ಈ ಬಗ್ಗೆ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ.

‘ ಹಾವೇರಿಯ ಜಾನಪದ ವಿವಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು. ಜಾನಪದ ವಿಶ್ವವಿದ್ಯಾಲಯಕ್ಕೆ 400 ಎಕರೆ ಜಮೀನು ಮಂಜೂರು ಮಾಡಬೇಕು. ವಿವಿ ಅಭಿವೃದ್ಧಿಗೆ ಸರ್ಕಾರ ಬಜೆಟ್ ನಲ್ಲಿ 100 ಕೋಟಿ ಹಣ ಕಾಯ್ದಿಡಬೇಕು ‘ ತೋಂಟದ ಸಿದ್ಧಲಿಂಗ ಶ್ರೀಗಳ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.