ಸಿದ್ದರಾಮಯ್ಯನಂತಹ 100 ಜನ ಬಂದ್ರೂ JDS ಪಕ್ಷವನ್ನು ಏನೂ ಮಾಡಕ್ಕಾಗಲ್ಲ : HDK

ಚಿಕ್ಕಮಗಳೂರು : ಕರ್ನಾಟಕದ ಬಿಜೆಪಿ ನಾಯಕತ್ವಕ್ಕೆ ದರಿದ್ರ ಬಂದಿದೆ. ಇಲ್ಲಿನ ಬಿಜೆಪಿ ನಾಯಕರು ಬೋಗಿಗಳಾಗಿದ್ದಾರೆ. ಅದಕ್ಕೇ ಉತ್ತರ ಪ್ರದೇಶದಿಂದ ಯೋಗಿಯನ್ನ ಕರೆತಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್‌ಡಿಕೆ ಆರೋಪಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಇಂತಹಾ ದರಿದ್ರ ಬಂದಿದೆ. ಯೋಗಿಗೆ ಯುಪಿಯಲ್ಲಿ ಉತ್ತಮ ಆಸ್ಪತ್ರೆ ಕಟ್ಟಲು ಸಾಧ್ಯವಾಗಿಲ್ಲ. ಅಲ್ಲಿನ ಜನರಿಗೆ ರಕ್ಷಣೆ ಇಲ್ಲ, ಕನ್ನಡಿಗರಿಗೆ ಹೇಗೆ ರಕ್ಷಣೆ ಸಂದೇಶ ನೀಡ್ತಾರೆ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಕುಮಾರಸ್ವಾಮಿ, ಕಾಂಗ್ರೆಸ್ ಮನೆ ಬಾಗಿಲು ಕಾಯ್ಕೊಂಡು ಸಿದ್ದರಾಮಯ್ಯ 250 ಓಟಿನಿಂದ ಗೆದ್ದಿದ್ದಾರೆ. ಜೆಡಿಎಸ್ ಪಕ್ಷದ ಬೆನ್ನಿಗೆ ಚೂರಿ ಹಾಕಿ ಹೋದವರು ನೀವು. ಈಗ ಜೆಡಿಎಸ್ ವರಿಷ್ಠರ ಬಗ್ಗೆ ಏಕವಚನದಲ್ಲಿ ಮಾತನಾಡ್ತೀರ. ತಾಕತ್ತಿದ್ರೆ ಪಕ್ಷೇತರವಾಗಿ ಚುನಾವಣೆಯಲ್ಲಿ ನಿಂತು ಗೆಲ್ಲಿ. 6 ಕೋಟಿ ಮತ ನಿಮ್ಮ ಜೇಬಲ್ಲಿದ್ಯಾ ಸಿದ್ದರಾಮಯ್ಯನವರೆ. ನೂರು ಜನ ಸಿದ್ದರಾಮಯ್ಯ ಬಂದ್ರು ಜೆಡಿಎಸ್ ಪಕ್ಷ ತೆಗೆಯಲು ಸಾಧ್ಯವಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com