ತುಮಕೂರು : ಚಾಕು ಇರಿದು ಹಣ ದೋಚುತ್ತಿದ್ದ ಐವರು ಕಳ್ಳರ ಬಂಧನ

ತುಮಕೂರು : ಪೆಟ್ರೋಲ್ ಕೇಳುವ ನೆಪದಲ್ಲಿ ಹಲವರ ಮೇಲೆ ಚಾಕು ಇರಿದು ತಲೆಗೆ ಹೊಡೆದು ಹಣ ದೋಚುತ್ತಿದ್ದ ಕಳ್ಳರನ್ನು ಕೊರಟಗೆರೆ ಪೋಲೀಸರು ಬಂಧಿಸಿದ್ದಾರೆ. ಕೊರಟಗೆರೆ ಪೊಲೀಸರ‌ ಕಾರ್ಯಾಚರಣೆ ಒಟ್ಟು ಐವರನ್ನು ಬಂಧಿಸಲಾಗಿದೆ.

ಬಂಧಿತರಿಂದ 30 ಗ್ರಾಂ ಚಿನ್ನ,110 ಗ್ರಾಂ ಬೆಳ್ಳಿ, 4 ಬೈಕ್ ಗಳು, 2 ಮೊಬೈಲ್, ಮಾರಕಾಸ್ತ್ರಗಳು ಸೇರಿದಂತೆ ಒಟ್ಟು 3 ಲಕ್ಷದ 25 ಸಾವಿರ ಬೆಲೆ ಬಾಳುವ ಒಡವೆ, ಬೈಕ್ ಗಳು ವಶಪಡಿಸಿಕೊಳ್ಳಾಗಿದೆ.

ಬಂಧಿತರೆಲ್ಲಾ ತುಮಕೂರು ‌ಜಿಲ್ಲೆಯವರಾಗಿದ್ದಾರೆ. ಇವರ ವಿರುದ್ಧ ಹಲವು ಠಾಣೆ ಗಳಲ್ಲಿ ಪ್ರಕರಣಗಳು ಇವೆ. ಕೊರಟಗೆರೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com