WATCH : ಕಮೆಂಟರಿ ಬಾಕ್ಸ್ ನಲ್ಲಿ ಗವಾಸ್ಕರ್ ನಾಗಿನ್ ಡಾನ್ಸ್ : ಬಾಂಗ್ಲಾ ಫ್ಯಾನ್ಸ್ ಹೇಳಿದ್ದೇನು..?

ಕೋಲಂಬೋದಲ್ಲಿ ಭಾನುವಾರ ನಡೆದ ಫೈನಲ್ ನಲ್ಲಿ ಬಾಂಗ್ಲಾದೇಶವನ್ನು ಮಣಿಸಿದ ಭಾರತ ನಿದಾಹಾಸ್ ಟಿ20 ತ್ರಿಕೋನ ಸರಣಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಟೀಮ್ ಇಂಡಿಯಾ ಸೋಲಿನ ದವಡೆಯಿಂದ ಪಾರಾಯಿತು.

ಟೂರ್ನಿಯುದ್ದಕ್ಕೂ ಬಾಂಗ್ಲಾದೇಶ ಆಟಗಾರರ ‘ ನಾಗಿನ್ ಡಾನ್ಸ್ ‘ ಗಮನ ಸೆಳೆದಿತ್ತು. ಶ್ರೀಲಂಕಾ ವಿರುದ್ಧ ಜಯಿಸಿದ ನಂತರ ಬಾಂಗ್ಲಾ ಆಟಗಾರರು ಮೈದಾನದಲ್ಲಿ ‘ ನಾಗಿನ್ ಡಾನ್ಸ್ ‘ ಮಾಡಿ ಸಂಭ್ರಮಿಸಿದ್ದರು. ಫೈನಲ್ ಪಂದ್ಯದ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಕೂಡ ಕಮೆಂಟರಿ ಬಾಕ್ಸ್ ನಲ್ಲಿ ‘ ನಾಗಿನ್ ‘ ಡಾನ್ಸ್ ಮಾಡಿದ್ದಾರೆ.

ಗವಾಸ್ಕರ್ ಡಾನ್ಸ್ ನೋಡಿ ಅಸಮಾಧಾನ ವ್ಯಕ್ತಪಡಿಸಿರುವ ಬಾಂಗ್ಲಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದು, ‘ ಅಸಭ್ಯ ‘ ಹಾಗೂ ‘ ನಾಚಿಕಗೇಡು ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com