‘ ಮಹಿಳೆಯರು ಪುರುಷರಿಗೆ ಖಂಡಿತ ಸಮಾನರಾಗಿದ್ದಾರೆ ‘ : ಸೌದಿ ಪ್ರಿನ್ಸ್ ಸಲ್ಮಾನ್ ಹೇಳಿಕೆ

‘ ಮಹಿಳೆಯರು ಪುರುಷರಿಗೆ ಖಂಡಿತವಾಗಿಯೂ ಸಮನರಾಗಿದ್ದಾರೆ ‘ ಎಂದು ಸೌದಿ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಸೋಮವಾರ ಹೇಳಿದ್ದಾರೆ. ಮಹಿಳೆಯರು ಪುರುಷರಿಗೆ ಸಮನಾಗಿದ್ದಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿರುವ ಸೌದಿ ರಾಜಕುಮಾರ ‘ ಖಂಡಿತವಾಗಿಯೂ ಮಹಿಳೆಯರು ಪುರುಷರಿಗೆ ಎಲ್ಲ ರೀತಿಯಲ್ಲಿಯೂ ಸಮಾನರಾಗಿದ್ದಾರೆ, ನಾವೆಲ್ಲರೂ ಮೊದಲು ಮನುಷ್ಯರು. ನಮ್ಮ ನಡುವೆ ಯಾವುದೇ ಭೇದವಿಲ್ಲ ‘ ಹೇಳಿದ್ದಾರೆ.

ಸೌದಿ ಅರೇಬಿಯಾ ಇತ್ತೀಚೆಗಷ್ಟೆ ತನ್ನ ಮಹಿಳಾ ನಾಗರಿಕರಿಗೆ ಕಾರು ಚಲಾಯಿಸುವ ಅಧಿಕಾರವನ್ನು ನೀಡಿತ್ತು. ಇದು ಮುಂಬರುವ ಜೂನ್ ತಿಂಗಳಿನಿಂದ ಜಾರಿಯಾಗಲಿದೆ. ಕೆಲವು ದಿನಗಳ ಹಿಂದಷ್ಟೇ ಸೌದಿ ಅರೇಬಿಯಾ ತನ್ನ ಮಹಿಳಾ ನಾಗರಿಕೆರಿಗೆ ಮೈದಾನದಲ್ಲಿ ಕುಳಿತು ಫುಟ್ಬಾಲ್ ಆಟ ವೀಕ್ಷಿಸುವ ಅನುಮತಿ ನೀಡಿತ್ತು.

Leave a Reply

Your email address will not be published.