ಕಾರ್ತಿಕ್ ಬಾರಿಸಿದ ಲಾಸ್ಟ್ ಬಾಲ್ Sixer ನೋಡಲಿಲ್ವಂತೆ ರೋಹಿತ್ : ಕಾರಣವೇನು..?

ಭಾನುವಾರ ಕೋಲಂಬೋದಲ್ಲಿ ನಡೆದ ನಿದಾಹಾಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ, ಬಾಂಗ್ಲಾದೇಶದ ವಿರುದ್ಧ 4 ವಿಕೆಟ್ ರೋಚಕ ಜಯ ಗಳಿಸಿತ್ತು. ಟೀಮ್ ಇಂಡಿಯಾ ಗೆಲುವಿನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸಮನ್ ದಿನೇಶ್ ಕಾರ್ತಿಕ್ ಮಹತ್ವದ ಪಾತ್ರ ವಹಿಸಿದ್ದರು.

ಭಾರತದ ಜಯಕ್ಕೆ 20ನೇ ಓವರಿನ ಕೊನೆಯ ಎಸೆತದಲ್ಲಿ 5 ರನ್ ಅಗತ್ಯವಿದ್ದಾಗ ಸಿಕ್ಸರ್ ಬಾರಿಸಿ ದಿನೇಶ್ ಕಾರ್ತಿಕ್ ಗೆಲುವು ತಂದಿತ್ತರು. ಈ ದೃಶ್ಯವನ್ನು ಅನೇಕ ಅಭಿಮಾನಿಗಳು ಕಣ್ತುಂಬಿಕೊಂಡರು. ಆದರೆ ಕಾರ್ತಿಕ್ ಸಿಡಿಸಿದ ಈ ಅಮೋಘ ಸಿಕ್ಸರ್ ಅನ್ನು ಸ್ವತಃ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರೇ ನೋಡಲಿಲ್ವಂತೆ. ಯಾಕೆ ನೋಡಲಿಲ್ಲ ಎಂದು ರೋಹಿತ್ ಮಾಧ್ಯಮಗಳೆದುರು ತಿಳಿಸಿದ್ದಾರೆ.

ಪಂದ್ಯದ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೋಹಿತ್ ‘ 1 ಎಸೆತದಲ್ಲಿ 5 ರನ್ ಬೇಕಿದ್ದಾಗ, ಪಂದ್ಯ ಸೂಪರ್ ಓವರ್ ವರೆಗೆ ಹೋಗುಬಹದು ಅನಿಸಿತು. ಸೂಪರ್ ಓವರ್ ಆಡುವುದಕ್ಕಾಗಿ ಪ್ಯಾಡ್ ಧರಿಸಿ ಸಿದ್ಧನಾಗಲು ಡ್ರೆಸಿಂಗ್ ರೂಮಿಗೆ ತೆರಳಿದ್ದೆ. ಆದರೆ ಲಾಸ್ಟ್ ಬಾಲ್ ನಲ್ಲಿ ಕಾರ್ತಿಕ್ ಸಿಕ್ಸರ್ ಬಾರಿಸಿದ್ದು ತಿಳಿದಾಗ ತುಂಬಾ ಸಂತೋಷವಾಯಿತು ‘ ಎಂದು ಹೇಳಿದ್ದಾರೆ.

Leave a Reply

Your email address will not be published.