ಕೋಪದ ಕೈಗೆ ಬುದ್ದಿಕೊಟ್ಟ ನಿಷ್ಕರುಣಿ ತಾಯಿ : ಮೂವರು ಮಕ್ಕಳನ್ನು ಎಂಥಾ ಸ್ಥಿತಿಗೆ ತಂದ್ಬಿಟ್ಲು !

ಪಾಟ್ನಾ : ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಕ್ರೂರ ತಾಯಿಯೊಬ್ಬಳು ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ತಾಯಿ ಬದುಕುಳಿದಿದ್ದು, ಸದ್ಯ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಮತಾ ಎಂಬಾಕೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ ಬಳಿಕ ತಾನೂ ವಿಷ ಸೇವಿಸಿದ್ದಾಳೆ. ಆದರೆ ಮಮತಾ ಬದುಕುಳಿದಿರುವುದಾಗಿ ತಿಳಿದುಬಂದಿದೆ.
ಮಕ್ಕಳಿಗೆ ವಿಷವುಣಿಸಿದ ಬಳಿಕ ವಾಂತಿಯಾಗಲು ಶುರುವಾಗಿದೆ. ಕುಟುಂಬಸ್ಥರು ಕೇಳಿದಾಗ ಅಮ್ಮ ತಿನ್ನಲು ಏನೋ ಕೊಟ್ಟಿದ್ದಳು ಎಂದು ಮಕ್ಕಳು ಹೇಳಿದ್ದಾರೆ. ಕೂಡಲೆ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಕ್ಕಳು ಮೃತಪಟ್ಟಿದ್ದಾರೆ.
ಮಕ್ಕಳ ದೇಹವನ್ನು ಮನೆಗೆ ತಂದ ವೇಳೆ ಮಮತಾ ತಾನೂ ವಿಷ ಸೇವಿಸಲು ಮುಂದಾಗಿದ್ದಾಳೆ. ಆದರೆ ಕುಟುಂಬಸ್ಥರು ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published.