Cricket : ಬಾಂಗ್ಲಾ ತಂಡಕ್ಕೆ ಶಾಕ್ ನೀಡಿದ ಕಾರ್ತಿಕ್ : ಫೈನಲ್‍ನಲ್ಲಿ ಭಾರತಕ್ಕೆ ರೋಚಕ ಜಯ

ವಿಕೆಟ್ ಕೀಪರ್ ಬ್ಯಾಟ್ಸಮನ್ ದಿನೇಶ್ ಕಾರ್ತಿಕ್ ತೋರಿದ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ನಿದಾಹಾಸ್ ಟಿ20 ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶದ ವಿರುದ್ಧ 4 ವಿಕೆಟ್ ರೋಚಕ ಜಯ ಸಾಧಿಸಿದೆ.

ಕೋಲಂಬೋದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಜಯದ ಹೊಸ್ತಿಲಲ್ಲಿತ್ತು. ಆದರೆ ದಿನೇಶ್ ಕಾರ್ತಿಕ್ ಮಿಂಚಿನ ಆಟವಾಡಿ ಬಾಂಗ್ಲಾ ಟ್ರೋಫಿ ಕನಸಿಗೆ ತಣ್ಣೀರೆರಚಿದರು.

ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಬಾಗ್ಲಾದೇಶ 20 ನಿಗದಿತ ಓವರುಗಳಲ್ಲಿ 166 ರನ್ ಸೇರಿಸಿತು. ಸಬ್ಬೀರ್ ರಹಮಾನ್ 77 ರನ್ ಗಳಿಸಿದರು. ಭಾರತದ ಯಜುವೇಂದ್ರ ಚಹಲ್ 3, ಜೈದೇವ್ ಉನಾದ್ಕಟ್ 2 ಹಾಗೂ ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು.

ಗುರಿಯನ್ನು ಬೆನ್ನತ್ತಿದ ಭಾರತ 20 ಓವರ್ ಅಂತ್ಯಕ್ಕೆ 168 ರನ್ ಸೇರಿಸಿ ಜಯ ಪಡೆಯಿತು. ಕೊನೆಯ ಎಸೆತದಲ್ಲಿ ಭಾರತದ ಗೆಲುವಿಗೆ 5 ರನ್ ಅಗತ್ಯವಿದ್ದಾಗ ಸೌಮ್ ಸರ್ಕಾರ್ ಬೌಲಿಂಗ್ ನಲ್ಲಿ ಸಿಕ್ಸರ್ ಬಾರಿಸಿದ ಕಾರ್ತಿಕ್ ಗೆಲುವು ತಂದು ಕೊಟ್ಟರು. ಕೇವಲ 8 ಎಸೆತಗಳನ್ನು ಎದುರಿಸಿದ ಕಾರ್ತಿಕ್ 29 ರನ್ ಗಳಿಸಿದರು.

ದಿನೇಶ್ ಕಾರ್ತಿಕ್ ಪಂದ್ಯಶ್ರೇಷ್ಟ ಪ್ರಶಸ್ತಿ ಹಾಗೂ ವಾಷಿಂಗ್ಟನ್ ಸುಂದರ್ ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

Leave a Reply

Your email address will not be published.

Social Media Auto Publish Powered By : XYZScripts.com