ಭಾರತೀಯ ವಾಟ್ಸಾಪ್‌ ಬಳಕೆದಾರರ ಮೇಲೆ ಚೀನಾ ಹ್ಯಾಕರ್ಸ್‌ಗಳ ಕಣ್ಣು : ಸೇನೆಯಿಂದ ಎಚ್ಚರಿಕೆ

ದೆಹಲಿ : ಭಾರತದ ವಾಟ್ಸಾಪ್‌ ಬಳಕೆದಾರರನ್ನು ಚೀನಾದ ಹ್ಯಾಕರ್ಸ್‌ಗಳು ಟಾರ್ಗೆಟ್‌ ಮಾಡಿರುವುದಾಗಿ ಭಾರತೀಯ ಸೇನೆ ಎಚ್ಚರಿಕೆ ನೀಡಿದ್ದು, ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಭಾರತೀಯ ಸೇನೆಯ ಅಧಿಕೃತ ಟ್ವಿಟರ್‌ನಿಂದ ಈ ಟ್ವೀಟ್ ಮಾಡಿ ಎಚ್ಚರಿಕೆ ನೀಡಲಾಗಿದೆ. ಭಾರತದ ಡಿಜಿಟಲ್‌ ಜಗತ್ತಿನ ಮೇಲೆ ಚೀನೀ ಹ್ಯಾಕರ್‌ಗಳು ಕಣ್ಣಿಟ್ಟಿದ್ದು, ವಾಟ್ಸಾಪ್‌ನ ಮಾಹಿತಿ ಕದಿಯುವ ಯತ್ನ ನಡೆಸುತ್ತಿದ್ದಾರೆ. ವಾಟ್ಸಾಪ್‌ ಮೂಲಕ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿರುವ ಮಾಹಿತಿಯನ್ನು ಹ್ಯಾಕ್‌ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಚೀನೀ ಸಂಖ್ಯೆ +86ರಿಂದ ಆರಂಭವಾಗುತ್ತಿದ್ದು, ನಿಮ್ಮ ವಾಟ್ಸಾಪ್‌ನೊಳಗೆ ಬಂದು ಎಲ್ಲಾ ಮಾಹಿತಿ ಕದಿಯಲು ಯತ್ನಿಸುತ್ತಿದ್ದಾರೆ ಎಂಬ ಸಂದೇಶವನ್ನು ಹರಿಬಿಡಲಾಗಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ಚೀನಾ ಜೊತೆ ಎಲ್‌ಎಸಿ ನಿಯಂತ್ರಣ ರೇಖೆಯಲ್ಲಿರುವ ಯೋಧರು ವಾಟ್ಸಾಪ್‌ ಸೇರಿದಂತೆ ಕೆಲ ಅಪ್ಲಿಕೇಶನ್‌ಗಳನ್ನು ಬಳಸದಂತೆ ಭಾರತೀಯ ಸೇನೆ ನಾಲ್ಕು ತಿಂಗಳ ಹಿಂದೆಯೇ ಎಚ್ಚರಿಕೆ ನೀಡಿತ್ತು.

Leave a Reply

Your email address will not be published.

Social Media Auto Publish Powered By : XYZScripts.com