ವಿಕ್ರಮ್ ಇನ್ವೆಸ್ಟ್ ಮೆಂಟ್ ಕಂಪನಿಯಿಂದ ಮೋಸ : ದೂರು ನೀಡಿದ ರಾಹುಲ್ ದ್ರಾವಿಡ್

ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್ ಬೆಂಗಳೂರಿನ ವಿಕ್ರಮ್ ಇನ್ವೆಸ್ಟ್ ಮೆಂಟ್ ಕಂಪನಿ ವಿರುದ್ಧ ಇಂದಿರಾನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರಾಹುಲ್ ದ್ರಾವಿಡ್, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹಾಗೂ ಪ್ರಕಾಶ್ ಪಡುಕೋಣೆ ಸೇರಿದಂತೆ ಸುಮಾರು 800 ಜನರಿಗೆ ನೂರಾರು ಕೋಟಿ ಮೋಸ ಮಾಡಿದ ಆರೋಪವನ್ನು ಕಂಪನಿ ಎದುರಿಸುತ್ತಿದೆ.

‘ ವಿಕ್ರಮ್ ಇನ್ವೆಸ್ಟ್ ಮೆಂಟ್ ಕಂಪನಿಯಲ್ಲಿ ನಾನು 20 ಕೋಟಿ ಬಂಡವಾಳ ಹೂಡಿದ್ದೆ. ಹೆಚ್ಚಿನ ಲಾಭವನ್ನು ನಿರೀಕ್ಷಿಸುತ್ತಿದ್ದ ನನಗೆ 16 ಕೋಟಿ ಮಾತ್ರ ದೊರಕಿತು. ನನ್ನ ಆರಂಭಿಕ ಬಂಡವಾಳದಿಂದ ನನಗೆ ಇನ್ನೂ 4 ಕೋಟಿ ರೂ ಮರಳಿ ಸಿಗಬೇಕಿದೆ ‘ ಎಂದು ದ್ರಾವಿಡ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ರಾಹುಲ್ ನೀಡಿರುವ ದೂರನ್ನು ಇಂದಿರಾನಗರ ಠಾಣೆಯಿಂದ ಬನಶಂಕರಿ ಪೋಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಹಗರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಶ್ರೀನಾಥ್, ಸುತ್ರಾಮ್ ಸುರೇಶ್, ನರಸಿಂಹ ಮೂರ್ತಿ, ಕೆಸಿ ನಾಗರಾಜ್ ಹಾಗೂ ಪ್ರಹ್ಲಾದ್ ಎಂಬುವವರನ್ನು ಬಂಧಿಸಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com