ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ : ಮರೆಯಾಗಲಿ ಗತದ ಕಹಿ..

ಯುಗಾದಿ ಕುರಿತು ಬರೆಯುವದೆಂದರೆ ನಿಸರ್ಗದ ಬಗ್ಗೆ ಹೇಳದೇ ಅದು ಪೂರ್ಣವಾಗುವದಿಲ್ಲ. ಯಾಕೆಂದರೆ ನಿಸರ್ಗ ಆ ವರ್ಷದ ಹೊಸತನ ಆರಂಭಿಸಿದ ಸಂಕೇತವಾಗಿ ನಾವು ಯುಗಾದಿಯನ್ನು ಸಂಭ್ರಮದಿಂದ ಆಚರಿಸುತ್ತೇವೆ. ಪರಿಸರದ ಕವಿ –“William Wordsworth” ಈ ರೀತಿ ಹೇಳುತ್ತಾರೆ-“Life is divided into three terms-that which was, which is, and which will be. Let us learn from the past to profit by the present, to live better in the future” ಅದನ್ನೇ ನಮ್ಮ ಧಾರವಾಡದ ಕವಿ –“ಯುಗ-ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ” ಎನ್ನುತ್ತಾರೆ.

ಗತದ ಕಹಿ ನೆನಪನ್ನು ಮರೆಯುತ್ತಾ,ಆದರೆ ಸಿಹಿ ನೆನಪಿನ ಮಧುರತೆಯಲಿ, ಭವಿಷ್ಯದ ಸು-ದಿನಗಳ  ಕನಸ ಕಾಣುತ್ತಾ ಇಂದಿನ ದಿನವ ಸುಖಿಸುವುದೇ ಜೀವನ. ಆ ತತ್ವವನ್ನು ನಿಸರ್ಗದಲ್ಲಿ ಕಲಿಯುತ್ತಾ ಸಾಗುತ್ತೇವೆ. ಪ್ರಕೃತಿ ನಮಗೆ ಗುರುವಾಗಿ ಸ್ವಾವಲಂಬನೆ & ಜವಾಬ್ದಾರಿಯುತ ಸಹಬಾಳ್ವೆಯ ತತ್ವವನ್ನು ಹೇಳಿ ಕೊಡುತ್ತದೆ. ಆದರೆ ಅದನ್ನೇ ನಾಶಮಾಡಿದರೆ ನಾವೇ ನಾಶವಾಗುವೆವು.

Image result for ugadi nature

ಹಿಂದೆ ಅನಕ್ಷರಸ್ಥರೂ ಪ್ರಕೃತಿ ಪ್ರೀತಿಸುವಷ್ಟು ಎಷ್ಟೋ ಪದವಿ ಪಡೆದ ನಾವು ಪ್ರೀತಿಸಲಾರವೇನೋ, ಏಕೆಂದರೆ ಮೂಲತಃ ಕೃಷಿಯಲ್ಲೇ ಹುಟ್ಟಿ ಅಲ್ಲೇ ಜೀವನ ಸಾಗಿಸುತ್ತಿದ್ದ ಅವರು ಪುಸ್ತಕಗಳಿಂದ ಕಲಿಯದಿದ್ದರೇನು ? ಹೊಲಗಳಿಂದ, ಕಾಡಿನಿಂದ, ಕೆರೆಗಳಿಂದ, ಹೊಳೆಗಳಿಂದ ತಿಳಿಯುತ್ತಿದ್ದರು. ಯಾವುದೇ ಪಡೆಯದ ಅವರು ನಿಖರವಾಗಿ ಮಳೆಯಾಗುವ ಕುರಿತು ಹೇಳುತ್ತಿದ್ದರು.

ಹಕ್ಕಿಗಳಸುನಿನಾದದ ಇಂಚರ, ದುಂಬಿಯಝೇಂಕಾರ, ತಂಗಾಳಿಯ ಇಂಪು, ಗಂಧದ ಕೆಂಪು ಅವರನ್ನು ತಲ್ಲೀನಗೊಳಿಸುತ್ತಿತ್ತು, ಚಿಕ್ಕಪುಟ್ಟರೋಗಗಳ ವೈದ್ಯರು ಅವರೇ ಸ್ವತಃ ಅವರಾಗಿದ್ದರು. ಅದಕ್ಕೆ ಬೇಕಾದಪರಿಕರಗಳನ್ನು ಪ್ರಕೃತಿಯಿಂದ ಪಡೆಯುತ್ತಿದ್ದರು.

Image result for ugadi woman

ಈಗ ನಮಗೆ ಪ್ರಕೃತಿಯ ಇಂತಹಸ್ಥಳಗಳು ನಮಗೆ ಪಿಕ್‌ನಿಕ್ತಾಣಗಳಾದರೆ ಅವರಿಗೆ ಅವೇ ಮನೆಯಾಗಿದ್ದವು. ರಾತ್ರಿ ಚುಕ್ಕಿಗಳೇ ಅವರ ಅವರಮೊಬೈಲ್, ವಾಟ್ಸಪ್ ಫೇಸ್ಬುಕ್‌ಗಳಾಗಿ ತಮ್ಮ ಮೇಲ್ಛಾವಣಿಯಲ್ಲಿ ಮಲಗುತ್ತಿದ್ದ ಆ ಕಾಲವೆಲ್ಲಿ.. ಗಗನಚುಂಬಿ ಕುಟುಂಬದಲ್ಲಿ ವರ್ಷಕ್ಕೊಮ್ಮೆಯಾದರೂ ಆಕಾಶವನ್ನೇ ವೀಕ್ಷಿಸದ ನಮ್ಮಸ್ಥಿತಿಯಲ್ಲಿ?  So ಮುಂದಿನ ಜನಾಂಗಕ್ಕೆ ನಾವು ಕೂಡಿಡಬೇಕಾಗಿದ್ದು ಹಣವಲ್ಲ, ಬಂಗಾರವಲ್ಲ ಅಥವಾ ಆಸ್ತಿಯಲ್ಲ ಬದಲಿಗೆ ಪ್ರಕೃತಿಯೇ ನಮ್ಮಸಂಪತ್ತು ಅದನ್ನೇ ಉಳಿಸೊಣ ಬೆಳಿಸೋಣ.

Leave a Reply

Your email address will not be published.