ತಾನೇ ವೈದ್ಯ ಎಂದು ಪೋಸು ಕೊಟ್ಟ AC ಮೆಕ್ಯಾನಿಕ್‌, ಈ ಬಾಲಕನಿಗೆ ಎಂಥಾ ಸಾವು ತಂದಿಟ್ಬಿಟ್ಟ !

ಕೋಲ್ಕತ್ತಾ : ತಾನು ವೈದ್ಯ ಎಂದು ಹೇಳಿಕೊಂಡು ಎಸಿ ಮೆಕ್ಯಾನಿಕ್ ಒಬ್ಬ ಯಡವಟ್ಟು ಮಾಡಿದ್ದು, ಆ್ಯಂಬುಲೆನ್ಸ್‌ನಲ್ಲಿ  ಬಾಲಕನ ಸಾವಿಗೆ ಕಾರಣನಾಗಿದ್ದಾನೆ.
ಕೋಲ್ಕತ್ತಾದಲ್ಲಿ ಈ ಘಟನೆ ನಡೆದಿದೆ. ಅರಿಜಿತ್ ದಾಸ್ ಎಂಬ ಬಾಲಕನನ್ನು ಬರ್ದ್ವಾನ್‌ ನಿಂದ ಕೋಲ್ಕತ್ತಾ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಈ ವೇಳೆ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಆ್ಯಂಬುಲೆನ್ಸ್‌ನಲ್ಲಿ ಎಸಿ ಮೆಕ್ಯಾನಿಕ್‌ ಸರ್ಫರಾಜ್‌ ಉದ್ದೀನ್ ಎಂಬಾತನನ್ನು ಕಳುಹಿಸಲಾಗಿತ್ತು. ಆತನಿಗೆ ವೈದ್ಯರು ಮಾಡುವ ಯಾವ ಕೆಲಸವೂ ತಿಳಿದಿರಲಿಲ್ಲ. ಅಲ್ಲದೆ ಬಾಲಕನಿಗೆ ಆ್ಯಂಬುಲೆನ್ಸ್‌ ನಲ್ಲಿ ಉಸಿರಾಟದ ಸಮಸ್ಯೆ ಆದಾಗ ಆಕ್ಸಿಜನ್‌ ಮಾಸ್ಕ್‌ ಹಾಕಲು ಬರದೆ ಬಾಲಕ ಮೃತಪಟ್ಟಿದ್ದಾನೆ.
ಆ್ಯಂಬುಲೆನ್ಸ್‌ಗಾಗಿ ಆಸ್ಪತ್ರೆಯವರು ಬಾಲಕನ ತಂದೆಯ ಬಳಿ 16 ಸಾವಿರ ರೂ ಹಣ ಪಡೆದಿದ್ದರು. ತಾನು ವೈದ್ಯ ಎಂದು ಹೇಳಿಕೊಂಡಿದ್ದ ಸರ್ಫರಾಜ್‌ 8ಸಾವಿರ ರೂ ಹಣ ಪಡೆದಿದ್ದ. ಆದರೆ ಆ್ಯಂಬುಲೆನ್ಸ್‌ನಲ್ಲಿ ಬಾಲಕನ ತಂದೆಯನ್ನು ಮಾತ್ರ ಕರೆದೊಯ್ಯದೆ ಬೇರೆ ವಾಹನದಲ್ಲಿ ಬರುವಂತೆ ಸೂಚಿಸಿದ್ದ.
ಆಕ್ಸಿಜನ್ ಮಾಸ್ಕ್‌ ಹಾಕಲೂ ಬರದೆ ಬಾಲಕನ ಸಾವಿಗೆ ಕಾರಣನಾದ ಮೆಕ್ಯಾನಿಕ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com