All England Open : ಸೆಮಿ ಫೈನಲ್‍ನಲ್ಲಿ ಸೋತು ನಿರ್ಗಮಿಸಿದ ಸಿಂಧು

ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಸೋತ ಭಾರತದ ಪಿ.ವಿ ಸಿಂಧು ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಶನಿವಾರ ನಡೆದ ಸೆಮಿಸ್ ಪಂದ್ಯದಲ್ಲಿ ಸಿಂಧು ಜಪಾನಿನ ಅಕಾನೆ ಯಾಮಾಗುಚಿ ಅವರ ವಿರುದ್ಧ 21-19 19-21 18-21 ಪಾಯಿಂಟ್ ಗಳಿಂದ ಶರಣಾದರು.

ಇದರೊಂದಿಗೆ ಆಲ್ ಇಂಗ್ಲೆಂಡ್ ಚಾಂಪಿಯನ್ಷಿಪ್ ನ ಫೈನಲ್ ತಲುಪುವ ಸಿಂಧು ಕನಸು ಭಗ್ನವಾಗಿದೆ. 1 ಗಂಟೆ 19 ನಿಮಿಷಗಳವರೆಗೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು ಅವರ ವಿರುದ್ಧ ಅಕಾನೆ ಯಾಮಾಗುಚಿ ಮೇಲುಗೈ ಸಾಧಿಸಿದರು.

ಪಂದ್ಯದ ಬಳಿಕ ಮಾತನಾಡಿದ ಓಲಿಂಪಿಕ್ ಪದಕ ವಿಜೇತೆ ಸಿಂಧು ‘ ನಾನು ಗೆಲುವಿಗಾಗಿ ನೂರಕ್ಕೆ ನೂರರಷ್ಟು ಪ್ರಯತ್ನ ಮಾಡಿದ್ದೇನೆ. ಆದರೆ ಇಂದು ನನ್ನ ದಿನವಾಗಿರಲಿಲ್ಲ, ಮುಂದಿನ ಬಾರಿ ಇನ್ನೂ ಪ್ರಬಲವಾದ ಹೋರಾಟದೊಂದಿಗೆ ಮರಳುತ್ತೇನೆ ‘ ಎಂದು ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com