ರಾಮಮಂದಿರಕ್ಕಾಗಿ ಹಿಂದೂಗಳು ಮತ್ತೊಮ್ಮೆ ಬಲಿದಾನಕ್ಕೆ ಸಿದ್ಧರಾಗಿ : BJP ಮುಖಂಡ

ಲಖನೌ : ರಾಮಜನ್ಮಭೂಮಿಗಾಗಿ ಹಿಂದೂಗಳು ಮತ್ತೊಮ್ಮೆ ತ್ಯಾಗಕ್ಕೆ ಸಿದ್ಧರಾಗಬೇಕು ಎಂದು ಬಿಜೆಪಿ ಮುಖಂಡ ವಿನಯ್‌ ಕಟಿಯಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಮಜನ್ಮಭೂಮಿ ಅಯೋಧ್ಯೆ ಹಿಂದೂಗಳಿಂದ ಮತ್ತೊಂದು ಬಲಿದಾನವನ್ನು ಕೇಳುತ್ತಿದೆ. ಅದಕ್ಕಾಗಿ ಹಿಂದೂಗಳು ಸಿದ್ಧರಾಗಬೇಕು ಎಂದಿದ್ದಾರೆ.
1992ರ ಡಿಸೆಂಬರ್‌ನಲ್ಲಿ ಮುಲಾಯಂ ಸರ್ಕಾರದ ಗುಂಡು ಹಾರಿಸಲು ಆದೇಶ ನೀಡಿದ್ದರು. ಈ ಕ್ರಮದಿಂದ ಅನೇಕರು ಪ್ರಾಣತ್ಯಾಗ ಮಾಡಬೇಕಾಯಿತು. ಈಗ ಮತ್ತೆ ಅಂತಹದ್ದೇ ಮತ್ತೊಂದು ಕ್ರಾಂತಿಯ ಅಗತ್ಯವಿದೆ. ಹಿಂದೂಗಳು ತಾವು ಹುತಾತ್ಮರಾಗಲು ಸಿದ್ದರಾಗಬೇಕು ಎಂದಿದ್ದಾರೆ.
1992ರಲ್ಲಿ ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ಕರ ಸೇವಕರು ಧ್ವಂಸ ಮಾಡಿದ್ದರು. ಇದಾದ ಕೆಲ ದಿನಗಳ ಬಳಿಕ ಎರಡು ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು. ಈಗ ಅಂತಹದ್ದೇ ಮತ್ತೊಂದು ಕ್ರಾಂತಿ ನಡೆಯಬೇಕು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com