Nidahas Trophy : ಭಾರತ – ಬಾಂಗ್ಲಾ ಫೈನಲ್ : ಪ್ರಶಸ್ತಿ ಕನಸಿನಲ್ಲಿ ರೋಹಿತ್ ಬಳಗ

ಕೋಲಂಬೋದ ಪ್ರೇಮದಾಸಾ ಕ್ರೀಡಾಂಗಣದಲ್ಲಿ ಭಾನುವಾರ ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ ನಿದಾಹಾಸ್ ಟಿ20 ತ್ರಿಕೋನ ಸರಣಿಯ ಫೈನಲ್ ಫೈಟ್ ನಡೆಯಲಿದೆ. ಉಭಯ ತಂಡಗಳು ಟ್ರೋಫಿಯನ್ನು ತಮ್ಮದಾಗಿಸಿಕೊಳ್ಳಲು ಸೆಣಸಾಡಲಿವೆ.

ಟೀಮ್ ಇಂಡಿಯಾ ಬಾಂಗ್ಲಾ ವಿರುದ್ಧ ಆಡಿದ ಎರಡೂ ಲೀಗ್ ಪಂದ್ಯಗಳಲ್ಲಿ ಜಯ ಗಳಿಸಿತ್ತು. ಶ್ರೀಲಂಕಾ ವಿರುದ್ಧ 2 ಲೀಗ್ ಪಂದ್ಯಗಳನ್ನು ಜಯಿಸಿರುವ ಶಾಕಿಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾ ತಂಡವನ್ನು ಭಾರತ ದುರ್ಬಲ ಎಂದು ಪರಿಗಣಿಸುವಂತಿಲ್ಲ.

ಶುಕ್ರವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡದ ಎದುರು ರೋಚಕ 2 ವಿಕೆಟ್ ಜಯ ಸಾಧಿಸಿರುವ ಬಾಂಗ್ಲಾ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ತಿರುಗೇಟು ನೀಡಲು ತವಕಿಸುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com