ಸಕುಟುಂಬ ಸಮೇತರಾಗಿ ಹೊಸ ಮನೆಗೆ ಕಾಲಿಟ್ಟ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ

ಹಾಸನ : ಹೆಚ್ಚು ಕಡಿಮೆ 6 ದಶಕಗಳ ಕಾಲ ರಾಜಕೀಯ ಹಾದಿ ಸವೆಸಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಈಗಷ್ಟೆ ತವರು ಜಿಲ್ಲೆಯಲ್ಲಿ ಸರಕಾರಿ ಮನೆ ಸಿಕ್ಕಿದೆ.
ಹೌದು, ಹಾಸನದ ಎಸ್ಪಿ ಕಚೇರಿ ಪಕ್ಕದಲ್ಲಿ ಸರಕಾರದ ಕಡೆಯಿಂದ ವಿಶಾಲ ಮನೆಯೊಂದನ್ನು ನಿರ್ಮಿಸಲಾಗಿದ್ದು, ನಿನ್ನೆಯಷ್ಟೇ ಗೌಡರು ಸಕುಟುಂಬ ಸಮೇತರಾಗಿ ಹೊಸ ಮನೆಯ ಗೃಹ ಪ್ರವೇಶ ಮಾಡಿದರು.


1960 ರ ದಶಕದಲ್ಲಿ ಸಕ್ರೀಯ ರಾಜಕೀಯದಲ್ಲಿರುವ ಗೌಡರು, ಬಾಡಿಗೆ ಮನೆ, ಸರಕಾರಿ ಪ್ರವಾಸಿ ಮಂದಿರದಲ್ಲೇ ಹೆಚ್ಚು ದಿನ ಕಳೆದಿದ್ದರು. ಬೆಂಗಳೂರಿಂದ ಬಂದ ಎಷ್ಟೋ ವೇಳೆ ದೇವೇಗೌಡರು ಹೊಳೆನರಸೀಪುರದ ಮನೆಯಲ್ಲಿ ಉಳಿಯುತ್ತಿದ್ದರು.
ಇಷ್ಟು ವರ್ಷಗಳ ನಂತರ ರಾಜ್ಯ ಸರಕಾರ ಮಾಜಿ ಪ್ರಧಾನಿ ಸರಕಾರಿ ಮನೆಯೊಂದನ್ನು ನೀಡಿದೆ. ದೈವದಲ್ಲಿ ಅಪಾರ ನಂಬಿಕೆ ಹೊಂದಿರುವ ಗೌಡರಿಗೆ ಎಲ್ಲಾ ರೀತಿಯಲ್ಲೂ ಸರಿ ಹೊಂದುವ ರೀತಿಯಲ್ಲಿ ಹೊಸ ಮನೆ ನಿರ್ಮಾಣ ಮಾಡಲಾಗಿದೆ.


ಪ್ರಮುಖವಾಗಿ ದೇವರ ಮನೆ, ಅಡುಗೆಮನೆ, ಮೊದಲ ಅಂತಸ್ತಿನಲ್ಲಿರುವ ರೂಂ ಪ್ರವೇಶಕ್ಕೆ ಲಿಫ್ಟ್, ವಿಶ್ರಾಂತಿ ಕೊಠಡಿ ಸೇರಿದಂತೆ ಎಲ್ಲಾ ಸೌಲಭ್ಯಗಳು ಇಲ್ಲಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೌಡರು, ನಾನು ಎಷ್ಟು ವರ್ಷ ಇರುತ್ತೇನೋ ಗೊತ್ತಿಲ್ಲ. ಇನ್ನೂ ಒಂದೂವರೆ ವರ್ಷ ಸಂಸದನಾಗಿರುತ್ತೇನೆ. ಅಲ್ಲೀವರೆಗೂ ಇಲ್ಲೇ ಉಳಿದು ಜನರ ಕುಂದು ಕೊರತೆ ಆಲಿಸುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com