ಶಮಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ : ದಾದಾ ಹೆಸರು ಪ್ರಸ್ತಾಪಿಸಿದ ಹಸೀನ್ ಹೇಳಿದ್ದೇನು..?

ಟೀಮ್ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸಿನ್ ಜಹಾನ್ ಶಮಿ ಕಿರುಕುಳ ಹಾಗೂ ಮೋಸ ಮಾಡಿದ ಆರೋಪವನ್ನು ಹೊರಿಸಿದ್ದರು. ಅಲ್ಲದೇ ಶಮಿ ವಿರುದ್ಧ ಪೋಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದರು. ಬಳಿಕ ಭಾರತದ ಕ್ರಿಕೆಟರ್ ಮೇಲೆ ‘ಕೊಲೆ ಯತ್ನ’ ಸೇರಿ 7 ಪ್ರಕರಣಗಳು ದಾಖಲಾಗಿತ್ತು.

ಇದೀಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಹಸೀನ್ ಜಹಾನ್ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಹೆಸರನ್ನು ಎಳೆಯುವ ಪ್ರಯತ್ನ ಮಾಡಿದ್ದಾರೆ. ಮಾಧ್ಯಮಗಳೆದುರು ಮಾತನಾಡಿರುವ ಹಸೀನ್ ಜಹಾನ್ ಈ ಕೆಳಗಿನಂತೆ ಹೇಳಿದ್ದಾರೆ.

‘ ಶಮಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಬಗ್ಗೆ ದಾದಾ ಅವರಿಂದ ಸಲಹೆ ಪಡೆಯಲು ಬಯಸಿದ್ದೆ. ಶಮಿ ಬೇರೆ ಯುವತಿಯರೊಂದಿಗೆ ನಡೆಸಿದ ಫೇಸ್ಬುಕ್ ಮೆಸೆಂಜರ್ ಹಾಗೂ ವಾಟ್ಸಾಪ್ ಸಂದೇಶಗಳ ಸ್ಕ್ರೀನ್ ಶಾಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕವಾಗಿ ಹಂಚಿಕೊಳ್ಳುವ ಮುನ್ನ ದಾದಾರನ್ನು ಸಂಪರ್ಕಿಸಿದ್ದೆ. ಕೆಲ ಕಾಲ ವಿಚಾರಿಸಿ ನಂತರ ಕರೆ ಮಾಡುವುದಾಗಿ ದಾದಾ ತಿಳಿಸಿದ್ದರು. ಹಲವು ದಿನಗಳು ಕಳೆದರೂ ದಾದಾ ಅವರಿಂದ ನನಗೆ ಕರೆ ಬರಲಿಲ್ಲ. ಇನ್ನೊಬ್ಬರ ವೈಯಕ್ತಿಕ ಬದುಕಿನ ವಿಷಯದಲ್ಲಿ ನಾನೇಕೆ ಮೂಗು ತೂರಿಸಬೇಕು ಎಂದು ಭಾವಿಸಿ ಸುಮ್ಮನಾಗಿರಬಹುದು ‘ ಎಂದಿದ್ದಾರೆ.

Leave a Reply

Your email address will not be published.