ಬಾಂಗ್ಲಾ ಕ್ರಿಕೆಟಿಗರ ವರ್ತನೆಗೆ ಜಯಸೂರ್ಯ ಗರಂ : ಮಾಜಿ ಆಟಗಾರ ಹೇಳಿದ್ದೇನು..?

ಕೋಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ನಿದಾಹಾಸ್ ಟಿ20 ತ್ರಿಕೋನ ಸರಣಿಯ ಕೊನೆಯ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 2 ವಿಕೆಟ್ ರೋಚಕ ಜಯ ಗಳಿಸಿದ ಬಾಂಗ್ಲಾದೇಶ ಫೈನಲ್ ತಲುಪಿತ್ತು. ಪಂದ್ಯದ ವೇಳೆ ಉಭಯ ತಂಡದ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿತ್ತು.

ಮ್ಯಾಚ್ ಮುಗಿದ ಬಳಿಕವೂ ಸುಮ್ಮನಿರದ ಬಾಂಗ್ಲಾ ಕ್ರಿಕೆಟರ್ಸ್ ಸಂಭ್ರಮಾಚರಣೆಯ ವೇಳೆ ತಾವಿದ್ದ ಡ್ರೆಸಿಂಗ್ ರೂಮಿನ ಗಾಜನ್ನು ಒಡೆದಿದ್ದರು. ಈ ಕೃತ್ಯ ಎಸಗಿದವರು ಯಾರೆಂದು ಪತ್ತೆ ಮಾಡಲು ಪ್ರೇಮದಾಸ ಕ್ರೀಡಾಂಗಣದ ಸಿಬ್ಬಂದಿಗೆ ಐಸಿಸಿ ಸೂಚಿಸಿತ್ತು.

ಬಾಂಗ್ಲಾ ಆಟಗಾರರು ತೋರಿದ ದುರ್ವರ್ತನೆಗೆ ಶ್ರೀಲಂಕಾದ ಮಾಜಿ ಕ್ರಿಕೆಟರ್ ಸನತ್ ಜಯಸೂರ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ಟ್ವೀಟ್ ಮಾಡಿರುವ ಸನತ್ ಜಯಸೂರ್ಯ ಬಾಂಗ್ಲಾ ಆಟಗಾರರ ವರ್ತನೆಯನ್ನು ‘ ಥರ್ಡ್ ಕ್ಲಾಸ್ ವರ್ತನೆ ‘ ಎಂದು ಕರೆದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com