ಅಪ್ಪು Birthday ಗೆ ಬಿಲ್ಡಪ್‌ ಪ್ರಥಮ್‌ನಿಂದ ಭರ್ಜರಿ ಗಿಫ್ಟ್‌ : ರಾಜರತ್ನನಿಗೆ ಒಳ್ಳೆ ಹುಡ್ಗ ಕೊಟ್ಟಿದ್ದೇನು ?

ಬಿಗ್‌ಬಾಸ್‌ ರಿಯಾಲಿಟಿ ಶೋ ಮೂಲಕ ಜನರ ಮನಗೆದ್ದಿದ್ದ ಒಳ್ಳೆ ಹುಡುಗ ಪ್ರಥಮ್‌ ಅಪ್ಪು ಹುಟ್ಟುಹಬ್ಬಕ್ಕೆ ವಿಶೇಷ ಗಿಫ್ಟ್ಂದನ್ನು ನೀಡಿದ್ದಾರೆ.

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರೇ ಸ್ಟಾರ್‌ ನಟರ ಹುಟ್ಟುಹಬ್ಬವಾದರೂ ಪ್ರಥಮ್‌ ವಿಭಿನ್ನ ಶೈಲಿಯಲ್ಲಿ ವಿಶ್‌ ಮಾಡುವುದು ವಾಡಿಕೆ. ಈ ಬಾರಿ ಸಹ ಅಪ್ಪು ಬರ್ತ್‌ಡೇ ಗೆ ಪ್ರಥಮ್‌ ವಿಭಿನ್ನವಾಗಿ ವಿಶ್ ಮಾಡಿರುವುದರ ಜೊತೆಗೆ ಚಿನ್ನ ಲೇಪಿತ ವೆಂಕಟೇಶ್ವರ ಸ್ವಾಮಿಯ ಫೋಟೋವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕಳೆದ ವರ್ಷ ಅಪ್ಪು ಬರ್ತ್‌ಡೇಗೆ ಪ್ರಥಮ್ ಚಿನ್ನಡ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದರು. ಈ ಬಾರಿ ಚಿನ್ನಲೇಪಿತ ವೆಂಕಟೇಶ್ವರ ಸ್ವಾಮಿಯ ಚಿನ್ನ ಲೇಪಿತ ಫೋಟೋವನ್ನು ನೀಡಿದ್ದಾರೆ. ಕೆಲ ದಿನಗಳ ಹಿಂದೆ ಪುನೀತ್‌ ತಮ್ಮ ಫ್ಯಾಮಿಲಿ ಪವರ್‌ ಕಾರ್ಯಕ್ರಮದಲ್ಲಿ ತಾವು ಹಾಕಿಕೊಂಡಿದ್ದ ಬ್ಲೇಜರನ್ನು ಪ್ರಥಮ್‌ಗೆ ಉಡುಗೊರೆಯಾಗಿ ನೀಡಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com